ಕಿರುತೆರೆ-ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ  ಪುತ್ತೂರಿನ ಹುಡುಗ ಆರ್ಯನ್

* ಸಿನಿಲೋಕದಲ್ಲಿ ಮಿಂಚುತ್ತಿರುವ ಧ್ರುವ ತಾರೆ ಆರ್ಯನ್
* ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ  ಮಿಂಚುತ್ತಿರುವ ಹುಡುಗ
* ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಕಲಾವಿದ

Sandalwood New Star Puttur dakshina kannada Aryan mah

ಸುಕನ್ಯಾ ಎನ್. ಆರ್(ಪತ್ರಿಕೋದ್ಯಮ ವಿದ್ಯಾರ್ಥಿನಿ, ವಿವೇಕಾನಂದ ಕಾಲೇಜು ಪುತ್ತೂರು) 

ಪುತ್ತೂರು(ಸೆ. 26)  ಕಲೆ ಪ್ರತಿಯೊಬ್ಬ ಕಲಾವಿದನ  ಜೀವನಾಡಿ. ಒಂದು ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರ ಮನ ಗೆಲ್ಲುವುದು ಒಬ್ಬ ಕಲಾವಿದನಿಗೆ  ಸವಾಲಿನ ಕೆಲಸ ಹೌದು? ಇಂತಹ ಅದ್ಭುತ ಕಲೆಯಲ್ಲೇ ತಮ್ಮನ್ನು ತೊಡಗಿಸಿಕೊಂಡು ವಿವಿಧ ಪಾತ್ರದಲ್ಲಿ  ಸಿನಿ ಪ್ರೇಕ್ಷಕರ ಮನಗೆದ್ದು ಸತತ ಏಳು ವರುಷ ಚಿತ್ರರಂಗದಲ್ಲಿ ತನ್ನ ಛಾಪನ್ನ ಮೂಡಿಸುತ್ತಿರುವ ವ್ಯಕ್ತಿ ಆರ್ಯನ್.

ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ,ಪುತ್ತೂರು ತಾಲೂಕಿನ ಸರ್ವೆ ಗ್ರಾಮದವರು. ಗಂಗಾಧರ ಮತ್ತು ಶಾಲಿನಿ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಟಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆಯಲ್ಲಿ ಮತ್ತು ಪ್ರೌಢ,ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಮುಗಿಸಿದರು.

ಚಿತ್ರಮಂದಿರ ತುಂಬಲಿದೆ... ಸಲಗ, ಕೋಟಿಗೊಬ್ಬ, ಭಜರಂಗಿ ತೆರೆಗೆ ದಿನಾಂಕ ಫಿಕ್ಸ್!

ಪದವಿ ಕಲಿಯುತ್ತಿರುವ ಸಮಯದಲ್ಲೇ ನಟನೆಯ ಬಗ್ಗೆ ಕನಸು ಕಂಡಂತಹ ವ್ಯಕ್ತಿ ಆರ್ಯನ್ ಶಿಕ್ಷಣದ ಜೊತೆಗೆ ಬಿಡುವಿನ ವೇಳೆ ನಟನೆಯ ತರಬೇತಿಯನ್ನು ಪಡೆಯುತ್ತಿದ್ದರು. ಪದವಿ ನಂತರ ಬೆಂಗಳೂರಿನಲ್ಲಿ ಎಂ.ಬಿ.ಎ ಮುಗಿಸಿ ಕೆನರಾ ಬ್ಯಾಂಕ್  ಐಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಒತ್ತಡದ ನಡುವೆ ತನ್ನ ಸಿನಿಮಾ ಕ್ಷೇತ್ರದ ಮೇಲಿದ ಆಸಕ್ತಿಯನ್ನು ತೊರೆಯಲಿಲ್ಲ. ಅವಕಾಶಕ್ಕಾಗಿ ಹಲವಾರು ಕಡೆ ಪ್ರಯತ್ನಿಸಿದರು.

ಬಂದ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡು ಬ್ಯೂಟಿ ವಿತ್ ಟ್ಯಾಲೆಂಟ್ 2014 ಮಾಡೆಲಿಂಗ್ ಇವೆಂಟ್  " ಮಿಸ್ಟರ್ ಪರ್ಫೆಕ್ಟ್" ಆಗಿ ಗುರುತಿಸಲ್ಪಟ್ಟರು. ಅಲ್ಲಿಯೇ ಪರಿಚಯವಾದ ರಾಧಿಕಾ ಶರ್ಮಾ,ವಿಜಯ ಸೂರ್ಯಮಲ್ಪೆ , ಪ್ರೇಮ್ ಕುಮಾರ್, ಇವರ ಸಹಾಯದಿಂದ ನಾಯಕ ನಟನಾಗಿ ಆಯ್ಕೆಯಾಗಿ, ಜೂನ್ 10,  2014 ರಂದು ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟರು.

ನಟನೆಯನ್ನು ಸಂಪೂರ್ಣವಾಗಿ ಮೈದುಂಬಿಸಿಕೊಳ್ಳುವ ಸಲುವಾಗಿ ಸೃಷ್ಟಿ ದೃಶ್ಯ ಕಲಾ ಮಾಧ್ಯಮದಲ್ಲಿ ಶಶಿಕಾಂತ್ ಯಡಹಳ್ಳಿ (ರಂಗ ನಿರ್ದೇಶಕರು)ಇವರ ಶಿಷ್ಯನಾಗಿ ಅಭಿನಯ ತರಬೇತಿ,ವಿನಯ ರತ್ನ ಸಿದ್ಧಿ ಇವರಿಂದ ನೃತ್ಯ ತರಬೇತಿ, ಥ್ರಿಲ್ಲರ್ ಮಂಜು ಅವರ ಶಿಷ್ಯನಾದ ಅಶೋಕ್ ಕುಮಾರ್ ಇವರಿಂದ ಫೈಟಿಂಗ್ ತರಬೇತಿಯನ್ನ ಪಡೆದಿದ್ದಾರೆ.

ಅವಕಾಶದ ದಾರಿಯಲ್ಲಿ ಪಯಣ: 'ಮನಸ್ಸು ನೀ' ಎಂಬ ಮೊದಲ ಕಿರುಚಿತ್ರದ ಮೂಲಕ ಪರದೆ ಮೇಲೆ ಕಾಣಿಸಿಕೊಂಡು ಮುಂದೆ ಇವರ ಸೃಷ್ಟಿ ಅಭಿನಯ ತರಬೇತಿಯ ಗೆಳೆಯರು ಸೇರಿ ಖದರ್ ಜಗದೀಶ್ ಅವರ ನಿರ್ದೇಶನದಲ್ಲಿ ಚಿತ್ರೀಕರಿಸಿದ ರೂಲರ್ ಕಿರು ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದರು,ಜೀವಂತ ಸಮಾಧಿಯಾಗಿ ನಟಿಸಿದ ಭ್ರಮೆ,ದೃಷ್ಟಿ,ಒಂಜಿ ಪಾತೆರ ಕಿರುಚಿತ್ರ,'ದೇಯಿ ಬೈದಿತಿ',ಅಮ್ಮ ಮಮತೆಯ ತೊಟ್ಟಿಲು ಆಲ್ಬಮ್ ಸಾಂಗ್, ವಿಕ್ರಮಾದಿತ್ಯ ಭೂಷಿ ನಿರ್ದೇಶನದ  'ವೇಷಧಾರಿ' ಕನ್ನಡ ಚಲನಚಿತ್ರದಲ್ಲಿ ನಾಯಕ ನಟನಾಗಿ,ಅದಿತಿ,ಗಂಧದ ಕುಡಿ , ಪೆನ್ಸಿಲ್ ಬಾಕ್ಸ್ ಕನ್ನಡ ಚಲನಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು  ಉದಯ ಕಾಮಿಡಿಯಲ್ಲಿ  ಪ್ರಸಾರವಾಗುತ್ತಿದ್ದ 'ಪ್ರಚಂಡ ಕಿಲಾಡಿಗಳು' ಹಾಗೂ ಇನ್ನೊಂದು ವಾಹಿನಿಯಲ್ಲಿ 'ಅಣ್ಣಯ್ಯ'ಧಾರಾವಾಹಿಯಲ್ಲಿ ನಟಿಸಿದ್ದರು. ಕನ್ನಡ ತುಳು ಭಾಷೆಯಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ತಮಿಳಿನಲ್ಲಿ 'ನೀನ್ ಇಲ್ಲಯ್ ಎನ್ ಡ್ರಾಲ್ ನಾನ್ ಇಲ್ಲಯ್' ,'ಕೋನ' ತೆಲುಗು,  'ವಯಲಿಲ್ ವಾಳ್ತ ಮಣಿತನ್' ತಮಿಳು_ಮಲಯಾಳಂ ಚಿತ್ರ , 'ಮರಣಾಡಿ'ತಮಿಳು ಚಲನ ಚಿತ್ರ, 'ತೋಳ್ ಕೊಡ್ ತೋಲಾ' ಹಾಗೂ 'ಮರಣ ಅಡಿ'ಎಂಬ ಎರಡು ತಮಿಳು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.
   
ಕಲಾವಿದನ ಪ್ರತಿಭೆಗೆ ದೊರೆತ ಅವಕಾಶ;  ಮುಂದೆ ಸಿದ್ದಾರ್ಥ,ಮಸ್ತ್ ಮೋಹಬ್ಬತ್,ಮೇಲು ಕೋಟೆ ಮಂಜ,ಉಪ್ಪಿ-2 ಐರಾವತ,ಯಾನ, ಗಂಧದ ಕುಡಿ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು.  ಕಲಾ ಗಂಗೋತ್ರಿ ನಾಟಕ ತಂಡ ಸೇರಿ,'ಚಿರಸ್ಮರಣೆ' ಅದರಲ್ಲಿ  ನಾಟಕ ಪ್ರದರ್ಶನ ಇವರ ಅವಿಸ್ಮರಣೀಯ ಕ್ಷಣಗಳಲ್ಲೊಂದು.

ಶ್ರಮಕ್ಕೆ ದೊರೆತ ಪ್ರತಿಫಲ: ಇವರ ಸಾಧನೆಯ ಹಾದಿಯನ್ನು ಗುರುತಿಸಿದ, ಎಸ್. ಎಸ್. ಕೆ ಪಾಟೀಲ್ ಇಂಗ್ಲಿಷ್ ಮೀಡಿಯಂ ಸಿ. ಬಿ. ಎಸ್. ಸಿ. ಸ್ಕೂಲ್ ಸಂಕೇಶ್ವರ್ (ಬೆಳಗಾವಿ),ರೋಟರಿ ಸಮುದಾಯ ದಳ ಬೆಳ್ಳಾರೆ ಟೌನ್, ಹಾಗೂ ವಿಷನ್ ಸೇವಾ ಟ್ರಸ್ಟ್ ಪುತ್ತೂರು ಸೇರಿದಂತೆ ಹಲವಾರು ಸಂಘ ಸಂಸ್ಥೆಯಿಂದ ಸನ್ಮಾನಿತರಾಗಿದ್ದಾರೆ.

ಮರಿ ಮೊಮ್ಮಗನ ಎತ್ತಿ ಮುದ್ದಾಡಿದ ದೇವೇಗೌಡ

ಜೊತೆಗೆ ಪುತ್ತೂರಿನ ಗೆಳೆಯರೊಂದಿಗೆ ಕೈ ಜೋಡಿಸಿ ಡ್ರೀಮ್ ಕ್ಯಾಚಸ೯ ಫಿಲಂ ಆಕ್ಟಿಂಗ್ ಕ್ಲಾಸ್ ಪ್ರಾರಂಭಿಸಿ ನಟನೆಯಲ್ಲಿ ಆಸಕ್ತಿಯುಳ್ಳ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ , ತರಬೇತಿ ಪಡೆದ ವಿದ್ಯಾರ್ಥಿಗಳು ಕನ್ನಡ ತುಳು ಚಿತ್ರ, ಧಾರಾವಾಹಿ, ಗಳಲ್ಲಿ  ಅವಕಾಶವನ್ನು ಪಡೆದಿರುವ ಹೆಮ್ಮೆ ಆರ್ಯನ್ ಅವರಿಗೆ ಸಲ್ಲುತ್ತದೆ , ಹಾಗೆ ತಾನೇ ನಿರ್ದೇಶಿಸಿ ನಟಿಸಿದ " "ಉಡಲ್ದರಸಿ" "ಎನ್ನ ಉಡಲ್ದ ಅಂಬಾರಿ" ಆಲ್ಬಮ್ ಸಾಂಗ್ ಬಿಡುಗಡೆಗೊಂಡಿದ್ದು, ಇತ್ತೀಚೆಗಷ್ಟೇ  ತೆರೆಮೇಲೆ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿರುವ 'ಗ್ರೂಫಿ' ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು ಎರಡನೇ ಕನ್ನಡ ಚಲನ ಚಿತ್ರ ಇಂದಿಗೆ ಆರನೇ ವಾರ ಯಶಸ್ವಿಯಾಗಿ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಕಣ್ ಸೆಳೆಯುತ್ತಿದೆ.

ನಟನೆಯ ಅಭಿರುಚಿಯನ್ನು ಸವಿದ ಆರ್ಯನ್ ಇದೀಗ ಮೂರನೇ ಚಿತ್ರ ' ಸಿಂಪಲ್ಲಾಗೊಂದ್  ಜರ್ನಿ' ಗೆ ನಾಯಕ ನಟನಾಗಿ ಅವಕಾಶವನ್ನು ತನ್ನದಾಗಿಸಿಕೊಂಡು ಯಶಸ್ಸಿನ ಮೆಟ್ಟಿಲೇರಿದ್ದಾರೆ.

 

Latest Videos
Follow Us:
Download App:
  • android
  • ios