ಫೋನ್‌ಪೇ ಮೂಲಕ ಹಣ ಕಳಿಸಿದ್ದಕ್ಕೆ ಮಗಳನ್ನೇ ಕಳೆದುಕೊಂಡ ತಂದೆ

ಗುಬ್ಬಿ ತಾಲ್ಲೂಕಿನಲ್ಲಿ ಫೋನ್‌ಪೇ ಮೂಲಕ ಹಣ ಕಳಿಸಿದ್ದಕ್ಕೆ ಮಗಳನ್ನೇ ಕಳೆದುಕೊಂಡ ತಂದೆಯೊಬ್ಬರ ಹೃದಯವಿದ್ರಾವಕ ಘಟನೆ ನಡೆದಿದೆ. ವಿವಾಹಿತ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ತುಮಕೂರು (ಜು.31): ಫೊನ್ ಪೇ, ಗೂಗಲ್ ಪೇ ಮೂಲಕ ಹೆಣ್ಣು ಮಕ್ಕಳಿಗೆ ಹಣ ಹಾಕಿಸೋ ಮುನ್ನಾ ಎಚ್ಚರ. ಮಗಳ ಮೊಬೈಲ್ ನಂಬರ್ ಕೊಟ್ಟು ಹಣ ಹಾಕಿಸಿದ ತಪ್ಪಿಗೆ ಮಗಳನ್ನೆ ಕಳೆದುಕೊಂಡ‌ ತಂದೆ‌ ಕಣ್ಣೀರು ಹಾಕಿದ್ದಾರೆ. 

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಗ್ಯಾರಹಳ್ಳಿಯಲ್ಲಿ ಮನಕಲಕುವ ಘಟನೆ ನಡೆದಿದೆ. ವಿವಾಹಿತನ ಕಿರುಕುಳಕ್ಕೆ ಬೇಸತ್ತು ಯುವತಿ ಭಾವನಾ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ತಮ್ಮದೇ ಗ್ರಾಮದ ವಿವಾಹಿತ ವ್ಯಕ್ತಿಗೆ ತನ್ನ ಮಗಳ ಮೊಬೈಲ್ ನಂಬರ್ ಕೊಟ್ಟು ಫೋನ್ ಪೇ ಮಾಡುವಂತೆ ಹಣ ಕೊಟ್ಟಿದ್ದಾರೆ. ವಿವಾಹಿತ ವ್ಯಕ್ತಿ ನವೀನ್ ಎಂಬಾತ ತನ್ನನ್ನು ಪ್ರೀತಿ ಮಾಡುವಂತೆ ನೀಡುತ್ತಿದ್ದ ನಿರಂತರ ಕಿರುಕುಳಕ್ಕೆ ಬೇಸತ್ತು ಮಗಳು ಸಾವಿಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. 

ಗುಬ್ಬಿ ತಾಲೂಕಿನ ಗ್ಯಾರಹಳ್ಳಿ ಗ್ರಾಮದ ಭಾವನಾ, ಮೈಸೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದಳು. ಮೈಸೂರಿನಲ್ಲಿದ್ದ ಭಾವನಾಳ ಖರ್ಚಿಗೆ ಅವಳ ಅಪ್ಪ ಪೋನ್ ಪೇ ಮೂಲಕ ಹಣ ಕಳಿಸಬೇಕಿತ್ತು. ತಮಗೆ ಫೋನ್‌ ಪೇ ವ್ಯವಹಾರ ಮಾಡಲು ಬಾರದ ಹಿನ್ನೆಲೆಯಲ್ಲಿ ಅದೇ ಗ್ರಾಮದ ನವೀನ್ ಎಂಬಾತನಿಗೆ ಹೇಳಿ ಮಗಳ ಮೊಬೈಲ್ ನಂಬರ್ ಕೊಟ್ಟು ಆಕೆಗೆ, ಹಣ ಕಳಿಸಲು ಹೇಳುತ್ತಿದ್ದರು. ಆದರೆ, ಈತ ಯುವತಿಯ ಮೊಬೈಲ್ ನಂಬರ್ ದುರ್ಬಳಕೆ ಮಾಡಿಕೊಂಡು, ತನ್ನನ್ನು ಪ್ರೀತಿ ಮಾಡುವಂತೆ ಭಾವನಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಮದುವೆ ಆಗಿ ಮಕ್ಕಳಿದ್ದ ವ್ಯಕ್ತಿ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದರಿಂದ ತಾನೇ ಸಾವಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

Related Video