
ಇನ್‌ಸ್ಟಾಗ್ರಾಮ್ ರೀಲ್ಸ್ ಸುಂದರಿ ಚೈತನ್ಯಾಳ ಸಾವಿನ ರಹಸ್ಯ ರಿವೀಲ್; ಪ್ರೇಮದ ಕೊಳ್ಳಿ ಇಟ್ಟ ಕಿರಾತಕ!
ರೀಲ್ಸ್ ಮಾಡುವ ಹುಚ್ಚಿನಲ್ಲಿದ್ದ ಯುವತಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಪ್ರೀತಿಸಿದವನೇ ಕೊಲೆಗಾರ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಯುವಜನತೆಗೆ ಎಚ್ಚರಿಕೆಯ ಗಂಟೆಯಾಗಿದೆ.
ಅವಳು ಡಿಗ್ರಿ ಸ್ಟೂಡೆಂಟ್. ಮುದ್ದಾದ ಹುಡುಗಿ. ಎಲ್ಲರಂತೇ ಆಕೆಗೂ ಕೊಂಚ ರೀಲ್ಸ್ ಹುಚ್ಚು. ಚೆಂದ ಚೆಂದದ ರೀಲ್ಸ್ಗಳನ್ನ ಅಪ್ಲೋಡ್ ಮಾಡ್ತಿದ್ದಳು. ತಕ್ಕಮಟ್ಟಿಗೆ ಲೈಕ್‌ಗಳೂ ಬರುತ್ತಿದ್ದವು. ಆದರೆ, ನಿನ್ನೆ ಆಕೆ ಒಂದು ರೀಲ್ ಅಪ್ಲೋಡ್ ಮಾಡಿದ್ದಳು. ಅದಕ್ಕೂ ಕೊಂಚ ಲೈಕ್ ಮತ್ತು ಕಮೆಂಟ್ ಬಂದಿತ್ತು. ಆದರೆ ಆ ರೀಲ್ ಅಪ್ಲೋಡ್ ಆಗಿ ಕೆಲವೇ ನಿಮಿಷಗಳು. ಅಪ್ಲೋಡ್ ಮಾಡಿದ ಚೆಲುವೆ ಮಸಣ ಸೇರಿದ್ದಳು. ಅಷ್ಟಕ್ಕೂ ಆ ಹೆಣ್ಣುಮಗಳಿಗೆ ಏನಾಯ್ತು..? ಆಕೆ ರೀಲ್ಸ್ ಅಪ್ಲೋಡ್ ಮಾಡಿದ ಮೇಲೆ ಏನೇನಾಯ್ತು..? ಆ ವಿಡಿಯೋದಲ್ಲಿ ಇದ್ದಿದ್ದಾದ್ರೂ ಏನು..? ಒಂದು ಸುಂದರ ಚೆಲುವೆಯ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್.ಐ.ಆರ್.
ತನ್ನ ಪಾಡಿಗೆ.. ಓದು.. ಕೆಲಸ.. ಮನೆ.. ರೀಲ್ಸು ಅಂತ ಇದ್ದ ಹೆಣ್ಣುಮಗಳು ಅವಳು. ರಾತ್ರಿ ಊಟ ಮಾಡಿ ಮಲಗಿದವಳು ಕೆಲವೇ ಗಂಟೆಗಳಲ್ಲಿ ಹೆಣವಾಗುತ್ತಾಳೆ ಎಂದರೆ ಏನ್ ಅರ್ಥ.. ಆದರೆ ಈಕೆಯ ಸಾವಿಗೆ ಅವನೇ ಕಾರಣ ಅಂತ ಆಕೆಯ ಕುಟುಂಬ ಹೇಳ್ತಿದೆ. ಅಷ್ಟಕ್ಕೂ ಯಾರು ಆ ಕಿರಾತಕ..? ಆತನಿಗೂ ಈ ಚೈತನ್ಯಾಗೂ ಏನ್ ಸಂಬಂಧ.. ಒಂದು ವಿಚಿತ್ರ ಲವ್ ಸ್ಟೋರಿ ಇಲ್ಲಿದೆ.
ತಾಯಿಯ ಕಿರಾಣಿ ಅಂಗಡಿಗೆ ಆಗಾಗ ಬರ್ತಿದ್ದ ಆತ ಅದೇಗೋ ಚೈತನ್ಯಾಳ ಸ್ನೇಹ ಸಂಪಾದಿಸಿದ್ದನು. ನಂತರ ಇಬ್ಬರೂ ಲವ್‌ನಲ್ಲಿ ಬಿದ್ದಿದ್ದರು. ಒಂದು ವರ್ಷ ಪ್ರೇಮ ಲೋಕದಲ್ಲಿ ವಿಹರಿಸಿದ್ದರು. ಆದರೆ ಒಂದು ವರ್ಷದ ನಂತರ ಇವರಿಬ್ಬರ ಲವ್ ಬಗ್ಗೆ ಚೈತನ್ಯ ಮನೆಯವರಿಗೆ ಗೊತ್ತಾಗುತ್ತದೆ.. ಆಗ ಮನೆ ಮಗಳಿಗೆ ಮತ್ತು ಆಕೆಯ ಪ್ರಿಯಕರ ಇಬ್ಬರನ್ನೂ ಕೂರಿಸಿಕೊಂಡು ಬುದ್ಧಿಮಾತು ಹೇಳಿ ಇಲ್ಲಿಗೆ ನಿಲ್ಲಿಸಿ ಅಂತ ಹೇಳಿದ್ದರು. ಅಂದಿನಿಂದ ಇಬ್ಬರೂ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.
ಆದರೆ, ಅವರಿಬ್ಬರ ನಡುವಿನ ಪ್ರೀತಿ ಮಾತ್ರ ಹಾಗೇ ಇತ್ತು. ಆಗಾಗ ಮೊಬೈಲ್‌ನಿಂದ ಫೋನ್ ಕಾಲ್, ಮೆಸೆಜ್ ಮಾಡುತ್ತಲೇ ಪ್ರೀತಿ ಸಾಗಿತ್ತು. ಪರಿಸ್ಥಿತಿ ಹೀಗಿರುವಾಗ ನಿನ್ನೆ ರಾತ್ರಿ ಚೈತನ್ಯ ಒಂದು ರೀಲ್ಸ್ ಅಪ್ಲೋಡ್ ಮಾಡ್ತಾಳೆ. ಆ ವಿಡಿಯೋವನ್ನ ನೋಡಿದ ಪ್ರೀಯಕರ ಸೀದಾ ಅವಳ ಮನೆಗೇ ಬಂದು ಜಗಳವಾಡಿದ್ದನು. ಪಕ್ಕದ ರೂಮಿನಲ್ಲಿ ತಾಯಿ ಮಲಗಿದ್ದರೂ ಇವರ ಗಲಾಟೆ ಅವರಿಗೆ ಕೇಳಿಸಿಲ್ಲ. ಆದರೆ ಇವರಿಬ್ಬರ ಜಗಳ ಕೊನೆಯಾಗಿದ್ದು ಮಾತ್ರ ಚೈತನ್ಯಳ ಸಾವಿನಿಂದ.
ಇನ್ನೂ ಬಾಳಿ ಬದುಕಬೇಕಿದ್ದ ಹುಡುಗಿ ಅವಳು. ಆದರೆ ಪ್ರೀತಿಸಿದ ತಪ್ಪಿಗೆ ಇವತ್ತು ಮಸಣ ಸೇರಿದ್ದಾಳೆ. ವಯಸಲ್ಲದ ವಯಸಲ್ಲಿ, ಪ್ರೀತಿ ಪ್ರೇಮ ಅಂತ ತಲೆಕೆಡಸಿಕೊಳ್ಳೊ ಮಕ್ಕಳಿಗೆ ಈ ಕಥೆ ಪಾಠವಾಗಲಿ.