
ಹುಡುಗಿ ಮೇಲೆ ನಂಗೆ ಫೀಲಿಂಗ್ಸ್ ಬರ್ತಿಲ್ಲವೆಂದು ತಾಳಿ ಎಸೆದು ಹೋದ ವರ!
ದೇವನಹಳ್ಳಿ ಮತ್ತು ಹೊಸಕೋಟೆಯ ಜೋಡಿಯೊಂದು ಮದುವೆಯ ಹಂತದಲ್ಲಿದ್ದಾಗ, ವರನು ಇದ್ದಕ್ಕಿದ್ದಂತೆ ಮದುವೆಯಿಂದ ಹಿಂದೆ ಸರಿದಿದ್ದಾನೆ. ಈ ಅನಿರೀಕ್ಷಿತ ಘಟನೆಯು ಎರಡೂ ಕುಟುಂಬಗಳಿಗೆ ಆಘಾತವನ್ನುಂಟುಮಾಡಿದೆ. ವರನ ನಿರ್ಧಾರದ ಹಿಂದಿನ ನಿಗೂಢ ಕಾರಣವೇನು?
ಅವನು ದೇವನಹಳ್ಳಿಯವನು.. ಅವಳು ಹೊಸಕೋಟೆಯವಳು.. ಇಬ್ಬರಿಗೂ ಕಂಕಣ ಕೂಡಿ ಬಂದಿತ್ತು. ಸಂಬಂದಿಕರ ಸಹಾಯದಿಂದ ಇಬ್ಬರ ಕುಟುಂಬ ಮದುವೆಯನ್ನ ನಿಶ್ಚಯಿಸಿತ್ತು. ಮದುವೆಗೂ ಮುನ್ನ ನಡೆಯೋ ಮಾತುಕತೆಗಳೆಲ್ಲಾ ಮುಗೀತು. ಪ್ರೀ ವೆಡ್ಡಿಂಗ್ ಫೋಟೋಶೂಟ್ ಕೂಡ ಮುಗೀತು. ಮದುವೆ ದಿನ ಎರಡೂ ಕುಟುಂಬ ಸಂರ್ಭರಮದಿಂದ ಕಲ್ಯಾಣ ಮಂಟಪಕ್ಕೆ ಬಂದಿತ್ತು. ರಾತ್ರಿ ರಿಸೆಪ್ಷನ್ ಮುಗಿದ ಮೇಲೆ ಎಲ್ಲರೂ ಬೆಳಗ್ಗೆ ಬ್ರಾಹ್ಮಿ ಮುಹೂರ್ತಕ್ಕೆ ನಡೆಯಬೇಕಿದ್ದ ತಾಳಿ ಕಟ್ಟೋ ಶಾಸ್ತ್ರಕ್ಕೆ ರೆಡಿಯಾಗುತ್ತಿದ್ದರು.
ಇನ್ನೇನು ವಧು ಕತ್ತಿಗೆ ತಾಳಿ ಬೀಳಬೇಕಿತ್ತು. ಅಷ್ಟರಲ್ಲೇ ವರ ಮಂಗಮಾಯ. ಎಲ್ಲಿ ಅಂತ ಹುಡುಕಾಡಿದ್ರೆ ಹೋಗಿ ರೂಮಿನಲ್ಲಿ ಕೂತಿದ್ದನು. ಯಾಕಪ್ಪ ಅಂದ್ರೆ ಅವನದ್ದು ಒಂದೇ ಉತ್ತರ. ನನಗೆ ಮದುವೆ ಬೇಡ ಸ್ವಾಮಿ ಎಂದಿದ್ದಾನೆ. ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡೋದಕ್ಕೆ ಹೊರಟಿತ್ತು ಎರಡೂ ಕುಟುಂಬ. ಆದರೆ ವರನ ಒಂದು ನಿರ್ಧಾರದಿಂದ ಇವತ್ತು ಎರಡೂ ಕುಟುಂಬಗಳ ಮರ್ಯಾದೆ ಬೀದಿಗೆ ಬಿದ್ದಿದೆ. ಅಷ್ಟಕ್ಕೂ ಮದುವೆ ಮಂಟಪಕ್ಕೆ ಬಂದ ಗಂಡಿಗೆ ಏನಾಯ್ತು.? ಆತ ತಾಳಿ ಕಟ್ಟೋ ಸಮಯಕ್ಕೆ ಕೈ ಕೊಟ್ಟಿದ್ದೇಕೆ..? ಅಂಥದ್ದು ಆವತ್ತು ಏನು ನಡೀತು.? ಒಂದು ವಿಚಿತ್ರ ಮ್ಯಾರೇಜ್ ಬ್ರೇಕ್ಅಪ್ ಸ್ಟೋರಿಯೇ ಇವತ್ತಿನ ಎಫ್.ಐ.ಆರ್.
ಅವರು ತಮ್ಮ ಪಾಡಿಗೆ ಕ್ರಿಕೆಟ್ ಆಡಿಕೊಂಡಿದ್ದರು. ಮರು ದಿನ ಅವರು ಆಡಿದ್ದ ಗ್ರೌಂಡ್ ಹತ್ತಿರದಲ್ಲೇ ಒಂದು ಮೃತದೆಹ ಸಿಕ್ಕಿತ್ತು. ಆ ಮೃತದೇಹ ಕೇರಳದ ವಯನಾಡು ಮೂಲದವನದ್ದಾಗಿತ್ತು. ಪೊಲೀಸರು ಕ್ರಿಕೆಟ್ ಆಡ್ತಿದ್ದವರನ್ನ ಬಂದಿಸಿದ್ದರು. ಇದೇ ಟೈಂಗೆ ನಮ್ಮ ಹೋಮ್ ಮಿನಿಸ್ಟರ್ ಆ ಕೊಲೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ಅಂತ ಹೆಳಿಬಿಟ್ಟಿದ್ದರು. ಆದರೆ, ನಂತರ ಅದೇ ಮಿನಿಸ್ಟರ್ ಯೂ ಟರ್ನ್ ಹೊಡೆದಿದ್ದಾರೆ. ಅಷ್ಟಕ್ಕೂ ಆ ಕೊಲೆ ನಡೆದಿದ್ದಾದ್ರೂ ಯಾಕೆ.? ಗೃಹ ಸಚಿವರು ಯೂ ಟರ್ನ್ ಹೊಡೆದಿದ್ದೇಕೆ.? ಅಷ್ಟಕ್ಕೂ ಆವತ್ತು ಆ ಗ್ರೌಂಡ್ನಲ್ಲಿ ನಡೆದಿದ್ದೇನು..? ಅನ್ನೋದ್ರ ತನಿಖೆಗಿಳಿದ ಪೊಲೀಸರಿಗೆ ಸಿಕ್ಕಿದ್ದು ಶಾಕಿಂಗ್ ವಿಚಾರ.
ಒಂದು ಸಾವು ಎಷ್ಟೆಲ್ಲಾ ತಿರುವಗಳನ್ನ ಪಡೆಯುತ್ತೆ ನೋಡಿ. ಸದ್ಯ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಈ ಕೊಲೆ ನಿಜಕ್ಕೂ ನಡೆದಿದ್ದು ಯಾಕೆ ಅನ್ನೋದನ್ನ ಅವರೇ ಹೇಳ್ತಾರೆ.