ಯಜಮಾನನನ್ನು ಕಳೆದುಕೊಂಡ ಶ್ವಾನದ ಮೌನ ರೋಧನೆ
ಶ್ವಾನ... ಇದು ಜಗತ್ತಿನ ಅತ್ಯಂತ ನಿಯತ್ತಿನ ಪ್ರಾಣಿ. ನಾಯಿಗೆ ಇರುವಷ್ಟು ನಿಷ್ಟೆ ಯಾವುದೇ ಜೀವಿಗೂ ಇರುವುದಿಲ್ಲ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಇದೀಗ ಇದನ್ನ ಸಾಬೀತುಪಡಿಸುವ ಘಟನೆಯೊಂದು ಕೊಡಗಿನಲ್ಲಿ ನಡೆದಿದೆ. ತನ್ನ ಯಜಮಾನನ್ನ ಕಳೆದುಕೊಂಡು ರೋಧಿಸುತ್ತಿರುವ ಶ್ವಾನದ ಮೌನ ಈ ಸ್ಟೋರಿಯಲ್ಲಿ ನೋಡಿ..
ಮಂಕು ಕವಿದಂತಿರೋ ಮುಖ. ಕೆಳಗೆ ಬಿದ್ದಿರೋ ಬಾಲ.. ಒಳಗೊಮ್ಮೆ ಹೊರಗೊಮ್ಮೆ.. ಅಲ್ಲಿ ಇಲ್ಲಿ ಓಡಾಡುತ್ತಾ ಏನನ್ನೋ ಕಾಯುತ್ತಿರೋ ಶ್ವಾನ.. ಅದನ್ನ ನೋಡಿದ್ರೆ ಆ ಶ್ವಾನ ಸಹಜವಾಗಿಲ್ಲ ಎಂದು ಯಾರೂ ಬೇಕಾದ್ರೂ ಹೇಳುತ್ತಾರೆ. ಅಷ್ಟೊಂದು ಬೇಸರದಲ್ಲಿದೆ ಆ ನಾಯಿ.. ಹೌದು ಈ ನಾಯಿಯ ಇಂದಿನ ಈ ಸ್ಥಿತಿಗೆ ಕಾರಣ ಅದೇ ಚಂಡ ವ್ಯಾಘ್ರ. ಹೌದು ವಿರಾಜಪೇಟೆ(Virajpet) ತಾಲ್ಲೂಕಿನ ರುದ್ರಗುಪ್ಪೆ ಗ್ರಾಮದಲ್ಲಿ ಎರಡು ವಾರಗಳ ಹಿಂದೆ ಹುಲಿ ದಾಳಿಗೆ ಗಣೇಶ ಎಂಬುವರು ಸಾವನ್ನಪ್ಪಿದ್ರು. ಈ ಗಣೇಶ್ ಪ್ರೀತಿಯಿಂದ ಸಾಕಿದ ಈ ನಾಯಿಯೇ ಟಾಮಿ. ಇಂದು ತನ್ನ ಯಜಮಾನ ಹುಲಿ ದಾಳಿಯಲ್ಲಿ ಮೃತಪಟ್ಟಿದ್ದಾನೆ ಅನ್ನೋ ವಿಷಯ ಇದಕ್ಕೆ ಗೊತ್ತಿಲ್ಲ. ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ಹಿಂದಿರುಗುವಾಗ ಗಣೇಶ ಪ್ರತಿನಿತ್ಯ ತನ್ನ ಪ್ರೀತಿಯ ಟಾಮಿಗೆ ತಿನ್ನಲು ಏನಾದ್ರೂ ತಂದೇ ತರುತ್ತಿದ್ದನಂತೆ. ಹಾಗಾಗಿ ಈ ನಾಯಿ ನಿತ್ಯ ಗಣೇಶನ ದಾರಿ ಕಾಯುತ್ತಿದೆಯಂತೆ. ಆದ್ರೆ ಕಳೆದ ವಾರ ಕೆಲಸಕ್ಕೆ ಹೋದ ಗಣೇಶ ಹಿಂದಿರುಗಿದ್ದು ಹೆಣವಾಗಿ. ಆದ್ರೆ ಇದರ ಅರಿವಿಲ್ಲದ ಈ ಟಾಮಿ ಇಂದೂ ಕೂಡ ಚಡಪಡಿಸುತ್ತಿದೆ. ತನ್ನ ಪ್ರೀತಿಯ ಯಜಮಾನನ ಬರುವಿಕೆಯನ್ನ ಕಾಯುತ್ತಿದೆ.
ಗಣೇಶನ ಮಕ್ಕಳೊಂದಿಗೂ ಆತ್ಮೀಯವಾಗಿದ್ದ ಟಾಮಿ(Tommy) ಇದೀಗ ಅವರ ಜತೆಯೂ ಆಡುತ್ತಿಲ್ಲ. ಸದಾ ಮಂಕು ಕವಿದು, ಬಾಲ ಕೆಳಗಿಳಿಸಿ ಚಡಿಪಡಿಸುತ್ತಿರುತ್ತದೆ. ಮನೆಯ ಒಳಗೆ ಹೊರಗೆ ಓಡಾಡಿ ಯಜಮಾನನನ್ನು ಅರಸುತ್ತಿದೆ. ತೋಟದ ಕಡೆಯಿಂದ ಯಾರಾದ್ರೂ ಬಂದರೆ ಓಡೋಡಿ ಬರುತ್ತದೆ. ಬಂದಿರುವುದು ತನ್ನ ಯಜಮಾನ ಅಲ್ಲ ಎನ್ನುವುದು ಅರಿವಾದಾಗ ಸಪ್ಪಗೆ ಹಿಂದಿರುಗುತ್ತದೆಯಂತೆ. ಒಂದೆಡೆ ಮನೆಯ ಯಜಮಾನನ್ನ ಕಳೆದುಕೊಂಡ ದುಃಖವಾದರೇ ಮತ್ತೊಂದೆಡೆ ಇತ್ತ ತಮ್ಮ ನಾಯಿಯ ಕಷ್ಟ ನೋಡಲಾರದೆ ಮನೆಯವರು ದುಖಿಸುತ್ತಿದ್ದಾರೆ.
79 ವರ್ಷದ ಬಳಿಕ ವಿದ್ಯಾರ್ಥಿ ಭವನ ಎರಡನೇ ಶಾಖೆ, ಎಲ್ಲಾಗ್ತಿದೆ ಗೊತ್ತಾ?
ಪ್ರಾಣಿಗಳಲ್ಲಿ ಅತ್ಯಂತ ಸ್ನೇಹಜೀವಿ ಶ್ವಾನಗಳು. ಆದರೆ, ಕೆಲವೊಮ್ಮೆ ನಾಯಿಯು ಖಿನ್ನತೆ(depression)ಯನ್ನು ಅನುಭವಿಸುತ್ತಿದೆ ಎಂದು ಸೂಚಿಸುವ ಹಲವು ಚಿಹ್ನೆಗಳನ್ನ ಹೊರಹಾಕುತ್ತಾವೆ. ಖಿನ್ನತೆಗೆ ಒಳಗಾದ ನಾಯಿಯು ತಿನ್ನುವುದು ಮತ್ತು ಕುಡಿಯುವುದನ್ನು ನಿಲ್ಲಿಸಬಹುದು. ತಮ್ಮ ಆಪ್ತರನ್ನ ಕಳೆದುಕೊಂಡಾಗ ಕುಟುಂಬಸ್ಥರಿಗೆ ಆಗುವಷ್ಟು ನೋವನ್ನ ಶ್ವಾನಗಳು ಅನುಭವಿಸುತ್ತಾವೆ ಅನ್ನೋದು ಪಶು ವೈದ್ಯರ ಅಭಿಪ್ರಾಯ.
ಸಿಡಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ? ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿದುಕೊಳ್ಳಿ
ಟಾಮಿಯ ಯಜಮಾನ ಗಣೇಶನಂತೂ ಇನ್ನೆಂದೂ ಮರಳುವುದಿಲ್ಲ. ಆದ್ರೆ ಈ ವಿಷಯವನ್ನು ಟಾಮಿಗೆ ಅರ್ಥ ಮಾಡಿಸಲು ಯಾರಿಗೂ ಸಾಧ್ಯವಿಲ್ಲ. ಹಾಗಾಗಿ ಟಾಮಿಯ ನಿರೀಕ್ಷೆಗೂ ಕೊನೆ ಇಲ್ಲದಂತಾಗಿದೆ. ಒಂದು ಕ್ರೂರ ಮೃಗ ಮನುಷ್ಯನ ಜೀವತೆಗೆದರೆ ಮತ್ತೊಂದು ಕಡೆ ಅದೇ ಮನುಷ್ಯನಿಗಾಗಿ ಮತ್ತೊಂದು ಮೃಗ ಮಮ್ಮಲ ಮರುಗುತ್ತಿರುವುದು ನೋವಿನ ಸಂಗತಿ.