Asianet Suvarna News Asianet Suvarna News

ಉಲ್ಟಾ ಹೊಡೆದ ಜಮೀರ್ ಭಾಯ್; ಸಂಬರಗಿ-ಜಮೀರಣ್ಣ ಈಗ ಭಾಯಿ ಭಾಯಿ!

Sep 14, 2020, 12:44 PM IST

ಬೆಂಗಳೂರು (ಸೆ. 14): ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಬಾಂಬ್ ಸಿಡಿಸುತ್ತೇನೆ. ಮುಖ್ಯವಾದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಜಮೀರ್ ಅಹ್ಮದ್ ಎರಡು ದಿನದ ಹಿಂದೆ ಹೇಳಿದ್ದರು. ಈಗ 'ನಾನು ಬಾಂಬ್‌ ಸಿಡಿಸುತ್ತೇನೆ ಎಂದು ಸುವರ್ಣ ನ್ಯೂಸ್ ತೋರಿಸ್ತಾ ಇದೆ. ನಾನು ಹಾಗೆ ಹೇಳಿಯೇ ಇಲ್ಲ. ನಾನು ಯಾವುದೇ ದಾಖಲೆ ಬಿಡುಗಡೆ ಮಾಡುವುದಿಲ್ಲ' ಎಂದು ಯೂ ಟರ್ನ್ ಹೊಡೆದಿದ್ದಾರೆ. 

ಆರೋಪಿಗಳ ನವರಂಗಿಯಾಟ ಸಿಸಿಬಿ ಮುಂದೆ ಇನ್ಮುಂದೆ ನಡೆಯಲ್ಲ..!

ಪ್ರಶಾಂತ್ ಸಂಬರಗಿ ಬಗ್ಗೆಯೂ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ. ಸಂಬರಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಡ್ರಗ್ ಕೇಸಲ್ಲಿ ನನ್ನ ಹೆಸರು ತಂದಿದ್ದಕ್ಕೆ ಕೇಸ್ ಹಾಕಿದ್ದೇನೆ ಅಷ್ಟೇ. ಸಂಜನಾ ಜೊತೆ ನನ್ನ ಫೋಟೋ ಇದ್ರೆ ತೋರಿಸಲಿ. ಡ್ರಗ್ ದಂಧೆಯಲ್ಲಿ ನನ್ನ ಹೆಸರು ತಳಕು ಹಾಕುವ ಪ್ರಯತ್ನ ಸಫಲವಾಗುವುದಿಲ್ಲ. ನಾನು ತಪ್ಪು ಮಾಡಿಲ್ಲ. ನನ್ನನ್ನು ಸಿಕ್ಕಿ ಹಾಕಿಸಲು ಸಾಧ್ಯವಿಲ್ಲ. ಫಾಸಿಲ್ ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿ' ಎಂದಿದ್ದಾರೆ.