Asianet Suvarna News Asianet Suvarna News

ಮೈಸೂರಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಹೆಚ್ಚಿದ ಬೇಡಿಕೆ: ಯಾರಾಗ್ತಾರೆ 'ಕೈ' ಅಭ್ಯರ್ಥಿ..?

ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಲೋಕಸಭಾ ಚುನಾವಣೆಗೆ ಮೈಸೂರಿನಿಂದ ಸ್ಫರ್ಧಿಸುತ್ತಾರೆ ಎನ್ನಲಾಗ್ತಿದೆ.
 

ಮೈಸೂರು: ಲೋಕಸಭಾ ಕದನ ಕಣ ಈಗಲೇ ಮೈಸೂರಿನಲ್ಲಿ ಜೋರಾಗಿದೆ.  ಸಿಎಂ ಸಿದ್ದರಾಮಯ್ಯರ(Siddaramaiah) ಪುತ್ರ ಲೋಕಸಭಾ ಚುನಾವಣೆಗೆ(Loksabha) ನಿಲ್ಲಲು ರೆಡಿಯಾಗಿದ್ದಾರೆ ಎನ್ನಲಾಗ್ತಿದೆ. ಪಕ್ಷ ಸೂಚಿಸಿದ್ರೆ ಲೋಕಸಭಾ ಸ್ಪರ್ಧೆಗೆ ಸೈ ಎಂದು ಯತೀಂದ್ರ ಸಿದ್ದರಾಮಯ್ಯ(Yatindra Siddaramaiah) ಹೇಳಿದ್ದಾರೆ. ಹೀಗಾಗಿ ಮಗನ ಚುನಾವಣಾ ರಾಜಕಾರಣಕ್ಕೆ ಶಕ್ತಿಯನ್ನು ಸಿದ್ದರಾಮಯ್ಯ ತುಂಬುತ್ತಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಮಗನಿಗೆ ಸಾಂವಿಧಾನಿಕ ಹುದ್ದೆ ನೀಡಿದ್ದು, ಆಶ್ರಯ ಸಮಿತಿ ಅಧ್ಯಕ್ಷರಾಗಿ ಪುತ್ರ ಯತೀಂದ್ರಗೆ ಸ್ಥಾನವನ್ನು ಕಲ್ಪಿಸಿದ್ದಾರೆ. ಇತ್ತ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಲಾಗುತ್ತಿದ್ದು, ಒಕ್ಕಲಿಗ ಅಭ್ಯರ್ಥಿಯಾದ್ರೆ ವೈದ್ಯ ಸುಶ್ರುತ್ ಕಣಕ್ಕಿಳಿಸಲು ಸದ್ದಿಲ್ಲದೆ ತಯಾರಿ ನಡೆಸಲಾಗುತ್ತಿದೆ. ಇವರು ಡಿ ಕೆ ಶಿವಕುಮಾರ್ ಸಂಬಂಧಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಈಶ್ವರಪ್ಪ ಪುತ್ರನ ಹಾವೇರಿ ಕನಸಿಗೆ ಆರಂಭದಲ್ಲೇ ವಿಘ್ನ: ಲಿಂಗಾಯತ ಪ್ರಾಬಲ್ಯ ಕ್ಷೇತ್ರದಲ್ಲಿ ಕುರುಬರಿಗೇಕೆ ಟಿಕೆಟ್..?

Video Top Stories