Karnataka Election: ಪುಟ್ಟ ಮಗುವಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಮಹಿಳೆ !

ಬೆಂಗಳೂರಿನ ಗಾಂಧಿನಗರದಲ್ಲಿ ಚುನಾವಣಾ ಕಾರ್ಯಕ್ಕೆ ಮಹಿಳೆಯೊಬ್ಬರು ಪುಟ್ಟ ಮಗುವಿನೊಂದಿಗೆ ಬಂದಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು: ಒಂದು ವರ್ಷದ ಮಗುವಿನೊಂದಿಗೆ ಚುನಾವಣಾ ಕಾರ್ಯಕ್ಕೆ ಮಹಿಳೆಯೊಬ್ಬರು ಹಾಜರಾಗಿದ್ದಾರೆ. ಇವರು ಬೆಂಗಳೂರಿನ ಗಾಂಧಿನಗರ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಮಗು ಇರುವ ಹಿನ್ನೆಲೆ ಚುನಾವಣಾ ಕಾರ್ಯದಿಂದ ವಿನಾಯಿತಿ ಕೋರಿದ್ದರು, ಆದ್ರೆ ಅಧಿಕಾರಿಗಳು ಅವಕಾಶ ನೀಡಿಲ್ಲ. ಅಲ್ಲದೇ ಇಂದು ಕೆಲಸಕ್ಕೆ ಬನ್ನಿ ಎಂದು ಅಧಿಕಾರಿಗಳು ಸೂಚಿಸಿದ್ದಾರಂತೆ. ಸದ್ಯ ಪುಟ್ಟ ಮಗುವಿನೊಂದಿಗೆ ಮಸ್ಟರಿಂಗ್ ಸೆಂಟರ್‌ಗೆ ಮಹಿಳೆ ಬಂದಿದ್ದು, ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ಕಾಂಗ್ರೆಸ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ: ರಾಜೀವ್ ಚಂದ್ರಶೇಖರ್‌ ಟ್ವೀಟ್‌

Related Video