ಸಾವರ್ಕರ್‌ ಅಂಚೆ ಚೀಟಿ ಬಿಡುಗಡೆ ಮಾಡಿದ್ದೇ ಇಂದಿರಾ ಗಾಂಧಿ ಸರ್ಕಾರ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾವರ್ಕರ್‌ ಫೋಟೋಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಕೈ ಪಾಳೆಯಕ್ಕೆ ಉದಾರಣೆ ಸಮೇತ ಬಿಜೆಪಿ ಕುಟುಕಿದೆ.
 

Share this Video
  • FB
  • Linkdin
  • Whatsapp

ಸಾವರ್ಕರ್‌ ಅಂಚೆ ಚೀಟಿ ಬಿಡುಗಡೆ ಮಾಡಿದ್ದೇ ಇಂದಿರಾ ಗಾಂಧಿ ಸರ್ಕಾರ. ಸಾವರ್ಕರ್‌ ಡಾಕ್ಯುಮೆಂಟರಿ ನಿರ್ಮಾಣಕ್ಕೆ ಸ್ವತಃ ಇಂದಿರಾ ಗಾಂಧಿ ದೇಣಿಗೆ ನೀಡಿದ್ರು. ಕಾಂಗ್ರೆಸಿನ ಇತಿಹಾಸ ಪ್ರಜ್ಞೆ ಪ್ರಧಾನ ಮಂತ್ರಿ ಬದಲಾದಂತೆ ಬದಲಾಗುವುದೇ ಎಂದು ಟ್ವೀಟ್ ಮಾಡಿದೆ. ಇಂದಿರಾಗಾಂಧಿ ಅವರೇ ಸಾವರ್ಕರ್‌ ಹೋರಾಟವನ್ನು ಕೊಂಡಾಡಿದ್ರು. ಕಾಂಗ್ರೆಸ್‌ ಇಂದು ಸಾವರ್ಕರ್‌'ನ್ನು ವಿರೋಧಿಸಬಹುದು. ಆದ್ರೆ ಅವರನ್ನು ಪ್ರೀತಿಸುವ ಸಾಲಿನಲ್ಲಿ ಗಾಂಧೀಜಿಯೂ ನಿಲ್ಲುತ್ತಾರೆ. ಗಾಂಧೀಜಿ ಪತ್ರಗಳಲ್ಲಿ ಪ್ರೀತಿಯಿಂದ ಭಾಯ್‌ ಎಂದು ಸಂಭೋದಿಸುತ್ತಿದ್ದರು ಎಂದು ಕಾಂಗ್ರೆಸ್‌ ವಿರುದ್ಧ ಟ್ವೀಟ್‌ ಮೂಲಕ ಬಿಜೆಪಿ ಕಿಡಿ ಕಾರಿದೆ.

2023ರ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್‌ಗೆ ಮೊದಲ ಹೊಡೆತ, ಪ್ರಮುಖ ನಾಯಕಿ ರಾಜೀನಾಮೆ!

Related Video