ಚುನಾವಣೆಗೆ ಸಿದ್ದರಾಮಯ್ಯ ಕ್ಷೇತ್ರ ಯಾವುದು? ಬಾದಮಿ ಸಾಕಣ್ಣ, ವರುಣಾ ನೋಡೋಣ!

ಯಾರು ಬಸನಗೌಡ ಪಾಟೀಲ್ ಯತ್ನಾಳ್? ಬಿಜೆಪಿ ಹೈಕಮಾಂಡ್ ಪ್ರಶ್ನೆಯಿಂದ ಮತ್ತೊಂದು ರಾಜಕೀಯ ಗುದ್ದಾಟಕ್ಕೆ ವೇದಿಕೆ ಸಜ್ಜಾಗಿದೆ. ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಖಚಿತ ಸೇರಿದಂತೆ ಇಂದಿನ ಇಡೀ ದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಇದು ಇನ್ನೂ ಬಗೆಹರಿಯದ ಪ್ರಶ್ನೆಯಾಗಿ ಉಳಿದಿದೆ. ಕಳೆದ ಬಾರಿ ಚಾಮಂಡೇಶ್ವರಿ ಹಾಗೂ ಬಾದಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದುಗೆ ಸಿಹಿಹಿಂತ ಹೆಚ್ಚು ಕಹಿಯೇ ಅನುಭವಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಗ್ಗರಿಸಿದರೆ, ಬಾದಾಮಿಯಲ್ಲಿ ಕೂದಲೆಳೆಯುವ ಅಂತರದಲ್ಲಿ ಗೆದ್ದುಕೊಂಡಿದ್ದರು. ಈ ಬಾರಿ ಬಾದಾಮಿ ದೂರ ಆಗುತ್ತಿದೆ. ಹೀಗಾಗಿ ಬೇಡ ಎಂದಿದ್ದಾರೆ. ಇತ್ತ ಜಮೀರ್ ಅಹಮ್ಮದ್ ಚಾಮರಾಜಪೇಟೆಯಲ್ಲಿ ನಿಲ್ಲುವಂತೆ ಮನವಿ ಮಾಡಿದ್ದಾರೆ. ಇದರಂತೆ ಹಲವು ಕಾರ್ಯಕರ್ತರು ತಮ್ಮ ತಮ್ಮ ಕ್ಷೇತ್ರದಲ್ಲಿ ನಿಲ್ಲುವಂತೆ ಮನವಿ ಮಾಡಿದ್ದಾರೆ. ಇದೀಗ ಪುತ್ರ ಯತೀಂದ್ರ ನಿಂತಿದ್ದ ವರುಣಾ ಕ್ಷೇತ್ರದಲ್ಲಿ ನಿಲ್ಲುವ ಸೂಚನೆಗಳು ಸಿಗುತ್ತಿದೆ. 

Related Video