
ರಾಜಕೀಯ ಸಂಚಲನ ಸೃಷ್ಟಿಸಿದೆ ಕಾಂಗ್ರೆಸ್ ರಣವ್ಯೂಹ! ಒಂದು ವ್ಯೂಹ.. ಒಂದು ನಿರ್ಧಾರ.. ಕೈಗೆ ಅದೃಷ್ಟ ರೇಖೆ!
ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತರುವ ಮೂಲಕ ಕಾಂಗ್ರೆಸ್ ಹೊಸ ಲೆಕ್ಕಾಚಾರ ಹಾಕಿದೆ. ಸಿದ್ದರಾಮಯ್ಯ ಅವರ ಬೆಂಬಲಿಗರ ಮತಬಲವನ್ನು ಬಳಸಿಕೊಳ್ಳುವ ಉದ್ದೇಶ ಹೊಂದಿದೆ. ಇದು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಹೊಸ ಬದಲಾವಣೆಗಳನ್ನು ತರಬಹುದು.
ಇಡೀ ರಾಜ್ಯದಲ್ಲೇ ಹೊಸ ಲೆಕ್ಕಾಚಾರ ಹುಟ್ಟುಹಾಕಿರೋ ವಿಷಯ ಇದು.. ದೆಹಲಿಯ ರಾಜಕೀಯ ರಣಕಲಿಗಳೂ ಕೂಡ, ಈ ಪೊಲಿಟಿಕಲ್ ಡೆವಲಪ್ಮೆಂಟ್ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.. ಕಾಂಗ್ರೆಸ್ ಅಂತೂ, ಇಡೀ ದೇಶದಲ್ಲಿ ಮತ್ತೆ ವಿಜಯ ಪತಾಕೆ ಹಾರಿಸಬೇಕು ಅನ್ನೋ ಕನಸು ಕಾಣ್ತಾ ಇದೆ.. ಆ ಕನಸು ನನಸು ಮಾಡಿಕೊಳ್ಳೋಕೆ, ಒಬ್ಬ ಕನ್ನಡಿಗನನ್ನೇ ಆರಿಸಿಕೊಂಡ ಹಾಗೆ ಕಾಣ್ತಿದೆ.. ಈ ಒಗಟು ಒಗಟು ಮಾತೆಲ್ಲಾ ಕ್ಲಿಯರ್ ಆಗಿ ಅರ್ಥವಾಗ್ಬೇಕು ಅಂದ್ರೆ, ನಾವೀಗ ಸ್ಟೋರಿ ಒಳಗೆ ಇಳೀಬೇಕು..