ಕಮಲ ಪಾಳಯದಲ್ಲಿ ಶುರುವಾಯ್ತಾ ಭರ್ಜರಿ ಮೈಂಡ್ ಗೇಮ್: ಬಿಜೆಪಿ ರಾಷ್ಟ್ರಾಧ್ಯಕ್ಷರಾಗೋದು ಯಾರು?

ಬಿಜೆಪಿ ಅಧ್ಯಕ್ಷ ಸ್ಥಾನದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಯಾರು ಪಕ್ಷದ ನೇತೃತ್ವ ವಹಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.  ನಾಯಕತ್ವದ ಆಯ್ಕೆ ಪ್ರಕ್ರಿಯೆ ಮತ್ತು ಅಭ್ಯರ್ಥಿಗಳ ಬಗ್ಗೆ ತಿಳಿಯಿರಿ.

First Published Sep 23, 2024, 8:42 PM IST | Last Updated Sep 23, 2024, 8:42 PM IST

ಕೇಸರಿ ಪಾಳಯದಲ್ಲಿ ದೊಡ್ಡದೊಂದು ಚರ್ಚೆ ಶುರುವಾಗಿದೆ.. 3 ತಿಂಗಳ ಹಿಂದೆಯೇ ಆರಂಭವಾಗಿದ್ದ ಚರ್ಚೆ, ಈಗ ಮತ್ತೆ ಮುನ್ನೆಲೆಗೆ ಬರ್ತಾ ಇದೆ.. ಘಟಾನುಘಟಿಗಳು ಕೂತಿದ್ದ ಬಿಜೆಪಿ ಅಧ್ಯಕ್ಷ ಗಾದಿಯ ಮೇಲೆ, ಈಗ ಯಾರು ಆಧಿಪತ್ಯ ಸಾಧಿಸಲಿದ್ದಾರೆ ಅನ್ನೋ ಕೌತುಕ ಎಲ್ಲರನ್ನೂ ಕಾಡ್ತಾ ಇದೆ. ಕಮಲಪಾಳಯದಲ್ಲಿ ಭರ್ಜರಿ ಮೈಂಡ್ ಗೇಮ್  ಶುರುವಾದ ಹಾಗಿದೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗೋದು ಅಂದ್ರೆ, ಬರೀ ಒಂದು ಪಕ್ಷದ ಪರವಾಗಿ ನಿಲ್ಲೋದಲ್ಲ.. ಪಕ್ಷವನ್ನ ಗೆಲ್ಲಿಸೋ ಜವಾಬ್ದಾರಿ ಹೊರೋದಷ್ಟೇ ಅಲ್ಲ. ಅದಕ್ಕಿಂತಲೂ ಪ್ರಮುಖವಾದ ಮತ್ತೂ ಒಂದು ಸಂಗತಿ ಇದೆ.  ಈ ಪ್ರೆಸಿಡೆಂಟ್ ರೇಸ್ನಲ್ಲಿ ಇರೋದು ಯಾರ್ಯಾರು..? ನರೇಂದ್ರ ಮೋದಿ ಹಾಗೂ ಅಮಿತ್ ಶಾ ಆಯ್ಕೆನಾ, ಸುಲಭವಾಗಿ ಮೆಚ್ಚಿಕೊಳ್ಳುತ್ತಾ RSS..? 100 ದಿನ ಕಳೆದ ಮೇಲೂ ಬಗೆಹರಿದಿಲ್ಲವೇಕೆ ಕೇಸರಿಪಡೆಯಲ್ಲಿರೋ ಬಿಕ್ಕಟ್ಟು.? ಏನಿದರ ಗುಟ್ಟು..?  ಯಾರಾಗ್ತಾರೆ ಕಮಲಾಧ್ಯಕ್ಷ..? ಇದಕ್ಕೆ ಉತ್ತರ ಏನು  ಇಲ್ಲಿದೆ.