Asianet Suvarna News Asianet Suvarna News

4 ಕ್ಷೇತ್ರ... 4 ತಂತ್ರ.. ಶಿಕಾರಿವೀರನ 4 ಟಿಕೆಟ್ ಮಂತ್ರ: ಆ 4 ಲೋಕಸಭಾ ಕ್ಷೇತ್ರಗಳಿಗೆ ಯಡಿಯೂರಪ್ಪ ಆಯ್ಕೆ ಯಾರು?

ಕರ್ನಾಟಕದ ಕೇಸರಿ ಪಾಳೆಯದಲ್ಲಿ ಟಿಕೆಟ್ ಟೆನ್ಷನ್..! ಯಾರಿಗೆ ಲಕ್, ಯಾರಿಗೆ ಶಾಕ್..? ಹಾಲಿ ಸಂಸದರ ಪೈಕಿ ಯಾರಿಗೆಲ್ಲಾ ಟಿಕೆಟ್ ಮಿಸ್..? ಲೋಕಸಭೆ ಟಿಕೆಟ್ ಟಕ್ಕರ್'ನಲ್ಲಿ ಶಿಕಾರಿವೀರನ ರೋಚಕ ಲೆಕ್ಕಾಚಾರ..! 

ಶಿವಮೊಗ್ಗ (ಮಾ.08): ಕರ್ನಾಟಕದ ಕೇಸರಿ ಪಾಳೆಯದಲ್ಲಿ ಟಿಕೆಟ್ ಟೆನ್ಷನ್..! ಯಾರಿಗೆ ಲಕ್, ಯಾರಿಗೆ ಶಾಕ್..? ಹಾಲಿ ಸಂಸದರ ಪೈಕಿ ಯಾರಿಗೆಲ್ಲಾ ಟಿಕೆಟ್ ಮಿಸ್..? ಲೋಕಸಭೆ ಟಿಕೆಟ್ ಟಕ್ಕರ್'ನಲ್ಲಿ ಶಿಕಾರಿವೀರನ ರೋಚಕ ಲೆಕ್ಕಾಚಾರ..! 4 ಕ್ಷೇತ್ರಗಳಿಗೆ 4 ತಂತ್ರ, ಇದುವೇ ರಾಜಾಹುಲಿಯ ಟಿಕೆಟ್ ಮಂತ್ರ..!   ಆ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಯಡಿಯೂರಪ್ಪನವರ ಕ್ಯಾಂಡಿಡೇಟ್ಸ್ ಯಾರು..? ಹಳೇ ಹುಲಿಗಳ ಪರ ನಿಂತಿದ್ದೇಕೆ ರಾಜಾಹುಲಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, 4 ಟಿಕೆಟ್ ಕಥೆ..! 4 ಲೋಕಸಭಾ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಯಾಗ್ಬೇಕು ಅನ್ನೋದ್ರ ಬಗ್ಗೆ ಯಡಿಯೂರಪ್ಪನವರು ಸ್ಪಷ್ಟ ನಿಲುವು ತಳೆದಿದ್ದಾರೆ. 

ಅದ್ರಲ್ಲಿ ಎರಡು ಬೆಂಗಳೂರು ಉತ್ತರ ಮತ್ತು ಉತ್ತರ ಕನ್ನಡದಲ್ಲಿ ಬಿಎಸ್ವೈ ಬೆಂಬಲ ಯಾರಿಗೆ ಅನ್ನೋದನ್ನು ನೋಡಿದ್ದಾಯ್ತು. ಉಳಿದೆರಡು ಕ್ಷೇತ್ರಗಳಾದ ಹಾವೇರಿ ಮತ್ತು ಬೆಳಗಾವಿಯಲ್ಲಿ ಶಿಕಾರಿವೀರನ ಶ್ರೀರಕ್ಷೆ ಯಾರಿಗೆ ಅನ್ನೋದನ್ನು ತೋರಿಸ್ತೀವಿ, ಬೆಂಗಳೂರು ಉತ್ತರ, ಉತ್ತರ ಕನ್ನಡ, ಹಾವೇರಿ ಮತ್ತು ಬೆಳಗಾವಿ.. ಈ 4 ಲೋಕಸಭಾ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಯಾಗ್ಬೇಕು ಅನ್ನೋದ್ರ ಬಗ್ಗೆ ಯಡಿಯೂರಪ್ಪನವರು ಸ್ಪಷ್ಟ ನಿಲುವು ತಳೆದಿದ್ದಾರೆ. ಬೆಂಗಳೂರು ಉತ್ತರದಲ್ಲಿ ಸದಾನಂದ ಗೌಡ ಮತ್ತು ಉತ್ತರ ಕನ್ನಡದಲ್ಲಿ ಅನಂತ ಕುಮಾರ್ ಹೆಗಡೆಗೆ ಬಿಎಸ್ವೈ ಬೆಂಬಲ.

ಹಾಗಾದ್ರೆ ಹಾವೇರಿ ಮತ್ತು ಬೆಳಗಾವಿಯಲ್ಲಿ ಶಿಕಾರಿವೀರನ ಶ್ರೀರಕ್ಷೆ ಯಾರಿಗೆ..? ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಕಾರಣ ಒಂದಷ್ಟು ಸ್ವಯಂಕೃತ ಅಪರಾಧಗಳು. ಆ ತಪ್ಪುಗಳನ್ನು ಲೋಕಸಭಾ ಚುನಾವಣೆಯಲ್ಲಿ ಸರಿ ಪಡಿಸಲು ಯಡಿಯೂರಪ್ಪ ಮುಂದಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಒಂದಷ್ಟು ಸ್ವಯಂಕೃತ ಅಪರಾಧಗಳೇ ಕಾರಣ. ಲೋಕಸಭಾ ಚುನಾವಣೆಯಲ್ಲಿ ಆ ಪ್ರಮಾದಗಳು ಮರುಕಳಿಸಲೇಬಾರದು ಅಂತ ಎಚ್ಚರ ವಹಿಸಲು ಮುಂದಾಗಿದ್ದಾರೆ ಮಾಜಿ ಸಿಎಂ ಯಡಿಯೂರಪ್ಪ. ಇದನ್ನು ಪಕ್ಷದ ಹೈಕಮಾಂಡ್ ಗಮನಕ್ಕೂ ತಂದಿರುವ ಬಿಎಸ್ವೈ, ಟಿಕೆಟ್ ಹಂಚಿಕೆಯ ಸೂತ್ರವನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ.

Video Top Stories