ಬೆಳಗಾವಿಯಿಂದ ಹೋಗಿದ್ದೆಲ್ಲಿ, ಎಲ್ಲಿದ್ದಾರೆ ಸಿಟಿ ರವಿ: ಬಿಜೆಪಿ ನಾಯಕನಿಗೆ ಜೀವ ಭಯ?

ಖಾನಾಪುರ ಠಾಣೆಯಿಂದ ರಾತ್ರೋ ರಾತ್ರಿ ರಾಮದುರ್ಗ ಠಾಣೆಗೆ ಶಿಫ್ಟ್‌ ಮಾಡಲಾಗಿತ್ತು. ಬೆಳಗಿನ ಜಾವ 3 ಗಂಟೆಗೆ ರಾಮದುರ್ಗ ಠಾಣೆಗೆ ಸಿ.ಟಿ. ರವಿ ಶಿಫ್ಟ್‌ ಮಾಡಲಾಗಿತ್ತು. ಅದಾದ ಮೇಲೆ ರಾಮದುರ್ಗ ಠಾಣೆಯಿಂದಲೂ ಸಿ.ಟಿ. ರವಿ ಅವರನ್ನ ಬೇರೆಡೆಯೆ ಕರೆದೊಯ್ದಿದ್ದರು. ಇಡೀ ರಾತ್ರಿ ಸಿ.ಟಿ. ಅವರನ್ನ ಪೊಲೀಸರು ಠಾಣೆಯಿಂದ ಠಾಣೆಗೆ ಸುತ್ತಿಸಿದ್ದಾರೆ. 

First Published Dec 20, 2024, 11:27 AM IST | Last Updated Dec 20, 2024, 11:29 AM IST

ಬೆಳಗಾವಿ(ಡಿ.20):  ವಿಧಾನ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಬಿಜೆಪಿ ಸದಸ್ಯೆ ಸಿ.ಟಿ. ರವಿ ಮಧ್ಯೆ ವಾಗ್ಯುದ್ಧವೇ ನಡೆದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ಗೆ ಪ್ರಾಸ್ಟಿಟುಟ್‌ ಅಂತ ಕರೆದಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿ ಸದಸ್ಯೆ ಸಿ.ಟಿ. ರವಿ ಅವರನ್ನ ಖಾನಾಪುರ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಖಾನಾಪುರ ಠಾಣೆಯಿಂದ ರಾತ್ರೋ ರಾತ್ರಿ ರಾಮದುರ್ಗ ಠಾಣೆಗೆ ಶಿಫ್ಟ್‌ ಮಾಡಲಾಗಿತ್ತು. ಬೆಳಗಿನ ಜಾವ 3 ಗಂಟೆಗೆ ರಾಮದುರ್ಗ ಠಾಣೆಗೆ ಸಿ.ಟಿ. ರವಿ ಶಿಫ್ಟ್‌ ಮಾಡಲಾಗಿತ್ತು. ಅದಾದ ಮೇಲೆ ರಾಮದುರ್ಗ ಠಾಣೆಯಿಂದಲೂ ಸಿ.ಟಿ. ರವಿ ಅವರನ್ನ ಬೇರೆಡೆಯೆ ಕರೆದೊಯ್ದಿದ್ದರು. ಇಡೀ ರಾತ್ರಿ ಸಿ.ಟಿ. ಅವರನ್ನ ಪೊಲೀಸರು ಠಾಣೆಯಿಂದ ಠಾಣೆಗೆ ಸುತ್ತಿಸಿದ್ದಾರೆ. 

ರಣಾಂಗಣವಾದ ವಿಧಾನಪರಿಷತ್: ಪಾರ್ಲಿಮೆಂಟ್‌ನಲ್ಲೂ ಕಾಂಗ್ರೆಸ್‌-ಬಿಜೆಪಿ ಹೈಡ್ರಾಮಾ!