ಗ್ಯಾರಂಟಿ ವಾಗ್ದಾನ ಈಡೇರಿಸಲು ಹೇಗಿದೆ ಸಿಎಂ ಸಿದ್ದು ಬ್ಲೂಪ್ರಿಂಟ್?: ಜೂ.1ರ ಡೆಡ್‌ಲೈನ್ ಸರ್ಕಾರಕ್ಕೆ ಸಿಗುತ್ತಾ ಲೈಫ್‌ಲೈನ್?
ಕಾಂಗ್ರೆಸ್ ತನ್ನ ಐದು ಗ್ಯಾರೆಂಟಿಗಳನ್ನು ಜಾರಿಗೆ ತರಲು ಇಲ್ಲದ ಕಸರತ್ತು ನಡೆಸುತ್ತಿದೆ. ಇದರ ಭಾಗವಾಗಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ಐದು ಗ್ಯಾರೆಂಟಿಗಳನ್ನು ಜನರಿಗೆ ಉಚಿತವಾಗಿ ನೀಡುವುದಾಗಿ ಹೇಳಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಉತ್ತಮ ಬಹುಮತ ಪಡೆದು, ಅಧಿಕಾರದ ಗದ್ದುಗೆಯನ್ನು ಹಿಡಿದಿದೆ. ಇದೀಗ ಸಿಎಂ ಸಿದ್ದರಾಮಯ್ಯ ಇವುಗಳ ಜಾರಿಗೆ ಬ್ಲೂ ಪ್ರಿಂಟ್ ರೆಡಿ ಮಾಡುತ್ತಿದ್ದಾರೆ. ಅಲ್ದಲೇ ಅಧಿಕಾರಿಗಳ ಜೊತೆಗೆ ಸಿಎಂ ನಡೆಸಿದ್ದಾರೆ. 5 ಗ್ಯಾರಂಟಿಗಳಿಗೆ ವಾರ್ಷಿಕ ಒಟ್ಟು 62 ಸಾವಿರ ಕೋಟಿ ವೆಚ್ಚ ಬೇಕು ಎಂದು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ರಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ. BPL ಕಾರ್ಡ್ದಾರರಿಗೆ ‘ಗೃಹಲಕ್ಷ್ಮೀ’ ಯೋಜನೆಗೆ ವಾರ್ಷಿಕ 12 ಸಾವಿರ ಕೋಟಿ ವೆಚ್ಚ ಸಾಧ್ಯತೆ ಇದೆ.
ಇದನ್ನೂ ವೀಕ್ಷಿಸಿ: ಮೋದಿ ಯುಗ ಆರಂಭವಾಗಿ 9 ವರ್ಷ, ಸಾಧಿಸಿದ್ದೆಷ್ಟು ?: ಕಾಂಗ್ರೆಸ್‌ನಿಂದ ಬಿಜೆಪಿಗೆ ಒಂಭತ್ತು ಪ್ರಶ್ನೆ