ನಿತೀಶ್ ಕುಮಾರ್ ನಿಗೂಢ ಹೆಜ್ಜೆ ಹಿಂದಿನ ರಹಸ್ಯಗಳೇನು?
ಪ್ರಧಾನಿ ಗದ್ದುಗೆ ಮೇಲೆ ಕಣ್ಣಿಟ್ಟು ಕಮಲ ಪಾಳಯಕ್ಕೆ ಕೈ ಕೊಟ್ಟರಾ ನಿತೀಶ್ ಕುಮಾರ್? ಬಿಜೆಪಿ ಜೆಡಿಯು ಮುನಿಸಿಗೆ ಬಯಲಾಯ್ತು ಕಾರಣ ಮೋದಿಗೆ ಎದುರಾಗಿದೆ ಮಹಾಘಟಬಂಧನದ ಪ್ರಥಮ ಪ್ರಹಾರ. ಈಗಿಂದ ಶುರುವಾಗುತ್ತಾ ಮೋದಿ ಅಮಿತ್ ಶಾ ಅವರ ಕೇಸರಿ ವ್ಯೂಹ?
ಬೆಂಗಳೂರು (ಆ.11): ಬಿಹಾರ ರಾಜಕೀಯದಲ್ಲಿ ದೊಡ್ಡ ಮಟ್ಟದ ಅಲ್ಲೋಲ ಕಲ್ಲೋಲವಾಗಿದೆ. ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡ ಜೆಡಿಯು ನಾಯಕ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್‌ಜೆಡಿ ಜೊತೆ ಕೈಜೋಡಿಸಿ 8ನೇ ಬಾರಿಗೆ ಮತ್ತೊಮ್ಮೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ರಾಜಕೀಯದ ಚದುರಂಗ ಅದೆಷ್ಟು ರಂಗುರಂಗಾಗಿರುತ್ತದೆ ಎನ್ನುವುದನ್ನು ಬಿಹಾರ ಬೆಳವಣಿಗೆಗಳನ್ನು ನೋಡಿದ ಬಳಿಕ ಅರ್ಥ ಮಾಡಿಕೊಳ್ಳಬಹುದು.ಮೋದಿ ಹಾಗೂ ನಿತೀಶ್ ಕುಮಾರ್ ಇಬ್ಬರು ರಾಜಕೀಯದ ಪರಮ ವೈರಿಗಳಾಗಿಯ ಗುರುತಿಸಿಕೊಂಡಿದ್ದವರು. 2014ರಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬಳಿಕ ನಿತೀಶ್ ಕುಮಾರ್ ಇದನ್ನು ಆಡಿಕೊಂಡಿದ್ದರು. ಇದರಿಂದ ಸಿಟ್ಟಾಗಿದ್ದ ಅವರು ಎನ್‌ಡಿಎ ಸಖ್ಯವನ್ನು ತೊರೆದಿದ್ದರು.
ಮೋದಿ, ಶಾಗೆ ಶಾಕ್, ಬಿಜೆಪಿ ಸಖ್ಯ ತೊರೆದಿದ್ದೇಕೆ ಬಿಹಾರ ಸಿಎಂ ನಿತೀಶ್ ಕುಮಾರ್..?
ಕೆಲ ವರ್ಷಗಳ ಬಳಿಕ ಬಿಹಾರ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆಯಾದವು. ಜೆಡಿಯು ಮತ್ತು ಎನ್‌ಡಿಎ ನಡುವೆ ಮೈತ್ರಿ ಏರ್ಪಟ್ಟ ಬಳಿಕ, ಚುನಾವಣೆಯಲ್ಲಿ ಮೋದಿ ಎದುರು ನಿಲ್ಲೋ ವ್ಯಕ್ತಿ ಯಾರಿದ್ದಾರೆ ಎಂದು ಸ್ವತಃ ನಿತೀಶ್ ಕುಮಾರ್ ಕೇಳಿದ್ದರು. ಆದರೆ, ಈ ಸ್ನೇಹ ಹೆಚ್ಚು ದಿನ ಉಳಿಯೋದಿಲ್ಲ ಎಂದಿದ್ದು ನಿಜವಾಗಿದೆ. ಎನ್‌ಡಿಎಯನ್ನು ತೊರೆದಿರುವ ಜೆಡಿಯು ಈಗ ಮಹಾಘಟಬಂದನ್ ಜೊತೆ ಸೇರಿ ಸರ್ಕಾರ ರಚಿಸಿದ್ದಲ್ಲದೆ, ಪ್ರಧಾನಿ ಮೋದಿ ವಿರುದ್ಧವೇ ಕಿಡಿಕಾರಿದ್ದಾರೆ.