ವಯನಾಡು ಅಖಾಡಕ್ಕೆ ನೆಹರು ಕುಟುಂಬದ ಮತ್ತೊಂದು ಕುಡಿ: ಕೈ ಪಕ್ಷದಲ್ಲಿ ಆರಂಭವಾಗುತ್ತಾ ಪ್ರಿಯಾಂಕಾ ಪರ್ವ.?

ಪ್ರಿಯಾಂಕಾ ಗಾಂಧಿ ಕಡೆಗೂ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದಾರೆ. ಈಗವರು ವಯನಾಡಿನಲ್ಲಿ ಈಜಬೇಕು, ಈಜಿ ಜಯಿಸಬೇಕು. ಆದ್ರೆ ಅದು ಅಷ್ಟು ಸುಲಭಾನಾ..?  ಈ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ.
 

First Published Oct 17, 2024, 1:45 PM IST | Last Updated Oct 17, 2024, 1:45 PM IST

ಕಾಂಗ್ರೆಸ್‌ನ ಅದೆಷ್ಟೋ ಕಾರ್ಯಕರ್ತರು 2 ದಶಕಗಳಿಂದ ಕಾದು ಕೂತಿದ್ದ ಆ ಟೈಮ್ ಈಗ ಬಂದಿದೆ. ಅಣ್ಣ ಬಿಟ್ಟು ಹೋದ ಕ್ಷೇತ್ರದಲ್ಲಿ ಹೊಸ ಕಿಚ್ಚು ಹಚ್ಚೋದಕ್ಕೆ ತಂಗಿಯ ಎಂಟ್ರಿಯಾಗಿದೆ. ನೆಹರು ಕುಟುಂಬದ ಮತ್ತೊಂದು ಕುಡಿ ಅಗ್ನಿಪರೀಕ್ಷೆಗೆ ಇಳಿದಿದೆ. ಉತ್ತರಕ್ಕೆ ಅಣ್ಣ, ದಕ್ಷಿಣಕ್ಕೆ ತಂಗಿ, ಮುಂಬರುವ ಚುನಾವಣೆಗಳಲ್ಲಿ ಮೋಡಿ ಮಾಡುತ್ತಾ ಈ ಜೋಡಿ..? ರಾಜಕೀಯ ಕುಟುಂಬದಿಂದಲೇ ಬಂದು, ರಾಜಕೀಯದಲ್ಲಿಯೇ ಇದ್ರೂ ಚುನಾವಣೆಯಲ್ಲಿ ಸ್ಪರ್ಧೆ ಅಂದ್ರೆ ಮಾರು ದೂರ ಇರ್ತಿದ್ದ ಪ್ರಿಯಾಂಕಾ ಕಡೆಗೂ ಮನಸ್ಸು ಮಾಡಿದ್ದಾರೆ. ಮೊದಲ ಯುದ್ಧ ಎದುರಿಸೋಕೆ ವಯನಾಡಿನಲ್ಲಿ ರಣರಂಗ ಸಜ್ಜಾಗಿದೆ. ಇದೇ ಇವತ್ತಿನ ಸುವರ್ಣ ಫೋಕಸ್ ವಯನಾಡಿಗೆ ಬಾ ತಂಗಿ..