Political Express: ಮಾಜಿ ಸಚಿವ ಈಶ್ವರಪ್ಪ ಕ್ಷೇತ್ರದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ!

ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಮತ ಬಹಿಷ್ಕಾರ ಶುರುವಾಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಮತ ಬಹಿಷ್ಕಾರ ಮಾಡುವುದಾಗಿ ಬಡಾವಣೆಯೊಂದರ ನಿವಾಸಿಗಳು ಪ್ರತಿಭಟನೆಯನ್ನು ನಡೆಸಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿನಿಧಿಸೋ ಶಿವಮೊಗ್ಗ ಕ್ಷೇತ್ರದ ನಿವಾಸಿಗಳು ಮತ ಬಹಿಷ್ಕಾರದ ಪ್ರತಿಭಟನೆಯನ್ನು ನಡೆಸಿದ್ದಾರೆ.

Share this Video
  • FB
  • Linkdin
  • Whatsapp

ಶಿವಮೊಗ್ಗ (ಮಾ.23): ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಮತ ಬಹಿಷ್ಕಾರ ಶುರುವಾಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಮತ ಬಹಿಷ್ಕಾರ ಮಾಡುವುದಾಗಿ ಬಡಾವಣೆಯೊಂದರ ನಿವಾಸಿಗಳು ಪ್ರತಿಭಟನೆಯನ್ನು ನಡೆಸಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿನಿಧಿಸೋ ಶಿವಮೊಗ್ಗ ಕ್ಷೇತ್ರದ ನಿವಾಸಿಗಳು ಮತ ಬಹಿಷ್ಕಾರದ ಪ್ರತಿಭಟನೆಯನ್ನು ನಡೆಸಿದ್ದಾರೆ. ತಮ್ಮನ್ನ ಪ್ರತಿನಿಧಿಸೋರು ತಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ಅಂತಾ ಆಕ್ರೋಶವನ್ನು ಹೊರ ಹಾಕಿದ್ದಾರೆ. ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿರುವ ಕೆಲವು ಮನೆಗಳಿಗೆ ಇದುವೆರಗೂ ಹಕ್ಕುಪತ್ರಗಳನ್ನು ನೀಡದೆ ಇರುವುದನ್ನು ಖಂಡಿಸಿ ಅಂಬೇಡ್ಕರ್ ಭವನದಮುಂದೆ ಪ್ರತಿಭಟನೆಯನ್ನು ನಡೆಸಿದರು. ಅಲ್ಲದೇ ಹಕ್ಕುಪತ್ರ ಕೊಡಿ ಇಲ್ಲ ವಿಷವುಣಿಸಿ ಎಂಬ ಘೋಷಣೆಯನ್ನು ಕೂಗಿದ್ದು, ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆಯನ್ನು ಸಹ ನೀಡಿದರು. 

Related Video