ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಿಂದ ಮತದಾನ ಜಾಗೃತಿ: 'ಮತ ಮಾರಾಟಕಲ್ಲ'ಅಭಿಯಾನ

ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾನ ಜಾಗೃತಿ
ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಿಂದ ಅಭಿಯಾನ
 'ಮತ ಮಾರಾಟಕಲ್ಲ' ಅಭಿಯಾನಕ್ಕೆ ಮೆಚ್ಚುಗೆ 
 

Share this Video
  • FB
  • Linkdin
  • Whatsapp

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ಹಿನ್ನೆಲೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಿಂದ ಬೆಂಗಳೂರಿನ ಮಂತ್ರಿಮಾಲ್‌ನಲ್ಲಿ 'ಮತ ಮಾರಾಟಕಲ್ಲ ಎಂಬ'ಜಾಗೃತಿ ಮೂಡಿಸಲಾಯಿತು. ಈ ವೇಳೆ ಮಾಲ್‌ಗೆ ಆಗಮಿಸಿದ್ದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಆಮಿಷಕ್ಕೆ ಒಳಗಾಗದೆ ಅಮೂಲ್ಯವಾದ ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.ಈ ವೇಳೆ ಎಲ್ಲರೂ ಮತದಾನವನ್ನು ಕಡ್ಡಾಯವಾಗಿ ಮಾಡಬೇಕು. ಈ ಮೂಲಕ ಉತ್ತಮ ಸರ್ಕಾರವನ್ನು ಆಯ್ಕೆ ಮಾಡಬೇಕು ಎಂದು ಓರ್ವರು ಹೇಳಿದರೆ, ಮತ್ತೋರ್ವರು, ನಮ್ಮ ಮತ ಮಾರಾಟಕ್ಕಿಲ್ಲ, ಅಭಿವೃದ್ಧಿಯನ್ನು ಯಾರು ಮಾಡುತ್ತಾರೋ ಅವರಿಗೆ ನಮ್ಮ ಮತ ಎಂದು ಎಂದು ಹೇಳಿದರು.

Related Video