Asianet Suvarna News Asianet Suvarna News

ನಿಕಟಪೂರ್ವ, ಅತಿ ನಿಕಟಪೂರ್ವ ಮುಖ್ಯಮಂತ್ರಿ, ಸುಡುಗಾಡೇ ಇರಲಿ: ಬಿಎಸ್‌ವೈಗೆ ಯತ್ನಾಳ್ ಟಾಂಗ್

Aug 26, 2021, 7:29 PM IST

ಚಾಮರಾಜನಗರ , (ಆ.26): ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರ ಸ್ಥಾನದಿಂದ ಕೆಳಗಿಳಿದರೂ ಸಹ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೈ ಬಿಡುವಂತೆ ಕಾಣುತ್ತಿಲ್ಲ. 

ವರಿಷ್ಠರು ಅನುವಂಶೀಯ ರಾಜಕಾರಣಕ್ಕೆ ಮಣೆ ಹಾಕಲ್ಲ : ಯತ್ನಾಳ್

ಬಿಎಸ್‌ವೈ ಹಾಗೂ ಅವರ ಕುಟುಂಬದ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಅಸಮಾಧಾನವನ್ನು ಹೊರಹಾಕುತ್ತಾ ಬಂದಿದ್ದಾರೆ. ಇದೀಗ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯುರಪ್ಪಗೆ ಟಾಂಗ್ ಕೊಟ್ಟಿದ್ದಾರೆ. ರಾಜಕಾರಣವೇ ಹಾಗೇ, ಹೋದ ಮೇಲೆ ಮುಗಿಯಿತು, ಕುರ್ಚಿ ಹೋದ ಮೇಲೆ ಹೊಯ್ತು ಎಂದು ಬಿಎಸ್‌ವೈ ಕಾಲೆಳೆದಿದ್ದಾರೆ.