Vidhan Parishat Election

*   ಸಾಹುಕಾರ್‌ ಸಹೋದರರ ಮಧ್ಯೆ ಕಾಳಗ ಶುರು
*   ಲಕ್ಷ್ಮೀ ಹೆಬ್ಬಾಳ್ಕರ್‌ ತಮ್ಮನಿಗೆ ಸತೀಶ್‌ ಜಾರಕಿಹೊಳಿ ಸಾಥ್‌ 
*   ಮಹಾಂತೇಶ್‌ ಕವಟಗಿಮಠ, ಲಖನ್‌ ಪರ ರಮೇಶ್‌ ಮತಯಾಚನೆ
 

Share this Video
  • FB
  • Linkdin
  • Whatsapp

ಬೆಳಗಾವಿ(ನ.18): ಬೆಳಗಾವಿಯಲ್ಲಿ ಪರಿಷತ್‌ ಚುನಾವಣೆಯ ಅಖಾಡ ರಂಗೇರಿದೆ. ಪರಿಷತ್‌ ಫೈಟ್‌ಗೆ ಸಾಹುಕಾರ್‌ ಸಹೋದರು ಫೀಲ್ಡ್‌ಗಿಳಿದಿದ್ದಾರೆ. ಮತ್ತೆ ಸತೀಶ್‌ ಜಾರಕಿಹೊಳಿ ಹಾಗೂ ರಮೇಶ್‌ ಜಾರಕಿಹೊಳಿ ಯುದ್ಧ ಶುರುವಾಗಿದೆ. ಪರಿಷತ್‌ ಪ್ರತಿಷ್ಠೆಗಾಗಿ ಸಾಹುಕಾರ್‌ ಸಹೋದರರ ಮಧ್ಯೆ ಕಾಳಗ ಆರಂಭವಾಗಿದೆ. ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಎರಡು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. 

ಮುಂದಿನ ಚುನಾವಣೆಗೆ ಬಿಜೆಪಿ ತಯಾರಿ : 3 ದಿನಗಳ ಜನ ಸ್ವರಾಜ್‌ ಯಾತ್ರೆ

ಸಾಹುಕಾರ್‌ ಸಹೋದರರ ಬದ್ಧವೈರಿ ಲಕ್ಷ್ಮೀ ಹೆಬ್ಬಾಳ್ಕರ್‌ ತಮ್ಮನಿಗೆ ಸತೀಶ್‌ ಜಾರಕಿಹೊಳಿ ಸಾಥ್‌ ಕೊಟ್ಟಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ ಸಹೋದರನನ್ನ ಮಣಿಸಲು ಗೋಕಾಕ್‌ ಸಾಹುಕಾರ್‌ಗೆ ಸವಾಲ್‌ ಹಾಕಿದ್ದಾರೆ. ಮಹಾಂತೇಶ್‌ ಕವಟಗಿಮಠ ಹಾಗೂ ಲಖನ್‌ ಜಾರಕಿಹೊಳಿ ಪರ ರಮೇಶ್‌ ಜಾರಕಿಹೊಳಿ ಮತಯಾಚನೆ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗ್ರಾಮ ಪಂಚಾಯತ್‌ ಸದಸ್ಯರ ಸಭೆಯಲ್ಲಿ ರಮೇಶ್‌ ಜಾರಕಿಹೊಳಿ ಅವರು ಭಾಗಿಯಾಗಿದ್ದರು. 

Related Video