ಮುಡಾ ಸಂಕಷ್ಟದಲ್ಲಿ ಸಿದ್ದರಾಮಯ್ಯ:ರಾಜೀನಾಮೆ ಕೊಟ್ಟು ಕಳಂಕದಿಂದ ಹೊರ ಬರಲಿ ಎಂದ ವರುಣಾ ಕ್ಷೇತ್ರದ ಜನ!

40 ವರ್ಷಗಳ ಕಾಲ ಯಾವುದೇ ಕಳಂಕವಿಲ್ಲದ ರಾಜಕಾರಣ ಮಾಡಿದ್ದ ಸಿದ್ದರಾಮಯ್ಯನವರಿಗೆ ಮುಡಾ ಪ್ರಕರಣ ಸಂಕಷ್ಟ ತಂದೊಡ್ಡಿದೆ. ಈ ಹಗರಣದ ಬಗ್ಗೆ ವರುಣಾ ಕ್ಷೇತ್ರದ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಸಿದ್ದರಾಮಯ್ಯನವರನ್ನು ಬೆಂಬಲಿಸಿದರೆ, ಇನ್ನು ಕೆಲವರು ಅವರನ್ನು ಟೀಕಿಸುತ್ತಿದ್ದಾರೆ.

Share this Video
  • FB
  • Linkdin
  • Whatsapp

ಮುಡಾ ಪ್ರಕರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯನವರಿಗೆ ಸಂಕಷ್ಟಗಳ ಮೇಲೆ ಸಂಕಷ್ಟಗಳು. 40 ವರ್ಷಗಳ ಕಾಲ ಯಾವುದೇ ಕಳಂಕವಿಲ್ಲದ ರಾಜಕಾರಣ ಮಾಡಿದ್ದ ಸಿದ್ದರಾಮಯ್ಯನವರಿಗೆ ಮುಡಾ ಉರುಳು ಬಿಗಿಯಾಗುತ್ತಲೇ ಇದೆ. ದಿಟ್ಟ ರಾಜಕಾರಣಿ, ಬಡವರ ಬದುಕುನ್ನು ಭಾಗ್ಯಗಳ ಮೂಲಕ ಬಂಗಾರವಾಗಿಸಿದ ರಾಜಕಾರಣಿ ಸಿದ್ದರಾಮಯ್ಯನವರನ್ನು ಮೂಡಾ ಮಂಕಾಗಿಸಿದೆ. ಈ ಮುಡಾ ಹಗರಣ ಕುರಿತು, ಸಿದ್ದರಾಮಯ್ಯನವರ ಕುರಿತು ವರುಣಾ ಕ್ಷೇತ್ರದ ಜನ ಏನ್ ಹೇಳ್ತಾರೆ?

ಬಿಗ್‌ಬಾಸ್‌ ನರಕ-ಸ್ವರ್ಗದಲ್ಲಿ ನಾಮಿನೇಷನ್‌ ಕಿಚ್ಚು, ಚರ್ಚೆ ಸೋತು ಮಸಿ ಹಚ್ಚಿಸಿಕೊಂಡವರು ಇವರೇ ನೋಡಿ!

ವರುಣಾದ ಮನೆ ಮಗನಿಗೆ ಈಗ ಅದೇ ಕ್ಷೇತ್ರದಲ್ಲಿ ಧ್ವಂಧ್ವ ಅಭಿಪ್ರಾಯ ಕೇಳಿ ಬರುತ್ತಿದೆ. ಈ ಪ್ರಕರಣಕ್ಕೂ ಸಿದ್ದರಾಮಯ್ಯನವರಿಗೂ ಯಾವುದೇ ಸಂಬಂಧವಿಲ್ಲವೆಂದು ಕೆಲವರು ಹೇಳ್ತಾರೆ. ಇನ್ನು ಕೆಲವರು 40 ವರ್ಷ ಶುದ್ಧ ರಾಜಕಾರಣ ಮಾಡಿದ ಸಿದ್ದರಾಮಯ್ಯನಿಗೆ ಈಗೇನಾಯ್ತು ಎಂದು ಬೇಸರ ವ್ಯಕ್ತ ಪಡಿಸುತ್ತಾರೆ. ಸಿದ್ದರಾಮಯ್ಯ ಸೋಲೇ ಮಾತೇ ಇಲ್ಲ ಎಂದು ಕೆಲವರು. ಸಿದ್ದರಾಮಯ್ಯ ನ್ಯಾಯಾಲಯಕ್ಕೆ ಅಗೌರವ ತೋರುತ್ತಿದ್ದಾರೆ ಎಂದು ಇನ್ನು ಕೆಲವರು. ಸಿದ್ದರಾಮಯ್ಯನನ್ನು ರಾಜಕೀಯವಾಗಿ ಹಣೆಯಲೆಂದೇ ಇದೆಲ್ಲ ಮಾಡ್ತಿದ್ದಾರೆ ಎಂದು ಹಲವು. ಸಿದ್ದರಾಮಯ್ಯ ಯಡಿಯೂರಪ್ಪನವರ ಹಾದಿಯಲ್ಲಿ ನಡೆಯಲಿ ಎಂದು ಇನ್ನು ಕೆಲವರು, ಇದಿಷ್ಟೇ ಏಕೆ ಸಿದ್ದರಾಮಯ್ಯನವರು ಈ ಪ್ರಕರಣದಲ್ಲಿ ಏನೆಲ್ಲ ತಪ್ಪು ಮಾಡಿದ್ದಾರೆ ಎಂದು ಜನ ಹೇಳಿದ್ದಾರೆ. 

Related Video