ಸಿದ್ದು ಅಹಿಂದ ಅಸ್ತ್ರ, ಡಿಕೆಶಿ ಒಕ್ಕಲಿಗ ಕಾರ್ಡ್, ನಾಯಕತ್ವದಲ್ಲಿ ಹೈಕಮಾಂಡ್ ಫುಲ್ ಕನ್‌ಫ್ಯೂಸ್..!
ಸಿದ್ದರಾಮೋತ್ಸವ ವ್ಯಕ್ತಿ ಪೂಜೆಯಲ್ಲ, ಶಕ್ತಿ ಪ್ರದರ್ಶನವಲ್ಲ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದರೂ ಕಾಂಗ್ರೆಸ್ ಒಳಗೆ ಮಾತ್ರ ಈ ವಿಚಾರವಾಗಿ ಭಿನ್ನಾಬಿಪ್ರಾಯ ಇದ್ದ ಹಾಗೆ ಕಾಣಿಸುತ್ತಿದೆ.
ಸಿದ್ದರಾಮೋತ್ಸವ ವ್ಯಕ್ತಿ ಪೂಜೆಯಲ್ಲ, ಶಕ್ತಿ ಪ್ರದರ್ಶನವಲ್ಲ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದರೂ ಕಾಂಗ್ರೆಸ್ ಒಳಗೆ ಮಾತ್ರ ಈ ವಿಚಾರವಾಗಿ ಭಿನ್ನಾಬಿಪ್ರಾಯ ಇದ್ದ ಹಾಗೆ ಕಾಣಿಸುತ್ತಿದೆ. ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ‘ಎಸ್.ಎಂ.ಕೃಷ್ಣ ನಂತರ ಒಕ್ಕಲಿಗ ಸಮುದಾಯದಿಂದ ನಾನು ಮುಖ್ಯಮಂತ್ರಿ ಸ್ಥಾನ ಸಿಗುವ ಹಂತ ತಲುಪಿದ್ದೇನೆ. ಹೀಗಾಗಿ ನನ್ನ ಕೈ ಬಲಪಡಿಸಿ ಎಂದು ಒಕ್ಕಲಿಗ ಸಮುದಾಯವನ್ನು ಮನವಿ ಮಾಡಿದ್ದೇನೆ’ಎಂದು ಡಿಕೆಶಿ ಒಕ್ಕಲಿಗ ಕಾರ್ಡ್ ಪ್ಲೇ ಮಾಡಿದ್ದಾರೆ.
40 % ಕಮಿಷನ್: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪಗೆ ಕ್ಲೀನ್‌ಚಿಟ್, ಮುಂದೇನು?
ತಾವು ಒಕ್ಕಲಿಗ ಸಮುದಾಯದ ನಾಯಕ ಅಷ್ಟೇ ಅಲ್ಲ ಎಲ್ಲ ಸಮುದಾಯಗಳಿಗೂ ನಾಯಕ ಎಂದು ಆಗಾಗ ಹೇಳುತ್ತಿದ್ದ ಶಿವಕುಮಾರ್ ಈಗ ನಿರ್ದಿಷ್ಟಸಮುದಾಯಕ್ಕೆ ಸಂದೇಶ ನೀಡಲು ಇದೇ ಸಮಯವನ್ನು ಆಯ್ಕೆ ಮಾಡಿದ್ದು ಏಕೆ ಎಂಬುದಕ್ಕೆ ಉತ್ತರ ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಆಗಮನ!
ಕನ್ನಡದಲ್ಲಿ, ದೇವರ ಹೆಸರಲ್ಲಿ ಡಾ. ವೀರೇಂದ್ರ ಹೆಗ್ಗಡೆ ಪ್ರಮಾಣ ವಚನ ಸ್ವೀಕಾರ
ಸಿದ್ದರಾಮಯ್ಯ ಬಣದ ಶಕ್ತಿ ಪ್ರದರ್ಶನದ ಅಖಾಡವಾಗಿರುವ ಈ ವೇದಿಕೆಯಲ್ಲಿ ಪಕ್ಷದ ವರಿಷ್ಠ ರಾಹುಲ್ ಗಾಂಧಿ ನೀಡುವ ಸಂದೇಶ ಅತಿ ಮುಖ್ಯವಾಗುತ್ತದೆ. ಯಾವುದೇ ಭಿನ್ನ ರಾಗವಿಲ್ಲದೆ ಸರಾಗವಾಗಿ ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಹರಸಿ ದೆಹಲಿಗೆ ತೆರಳಿದರೆ ಅದು ಸಿದ್ದರಾಮಯ್ಯ ಪರ ಸ್ಪಷ್ಟಸಂದೇಶವಾಗಿ ಬಿಡುತ್ತದೆ ಎನ್ನುವುದು ಲೆಕ್ಕಾಚಾರ!