Asianet Suvarna News Asianet Suvarna News

ವೆಂಕಯ್ಯ ನಾಯ್ಡು, ಕರ್ನಾಟಕ ಮತ್ತು ಜನಾರ್ಧನ ಹೋಟೆಲ್: ಸಂಬಂಧ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ!

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧಿಕಾರವಧಿ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ವೆಂಕಯ್ಯ ನಾಯ್ಡು ಹಾಗೂ ಕರ್ನಾಟಕದ ಸಂಬಂಧದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದರು. ವೆಂಕಯ್ಯ ನಾಯ್ಡು ಹಾಗೂ ಜನಾರ್ಧನ ಹೋಟೆಲ್‌ ನಡುವಿನ ಇಂಟ್ರಸ್ಟಿಂಗ್‌ ಕಹಾನಿಯನ್ನು ಬಿಚ್ಚಿಟ್ಟರು.

Aug 8, 2022, 8:58 PM IST

ಬೆಂಗಳೂರು (ಆ.8): ಇನ್ನೆರಡು ದಿನಗಳಲ್ಲಿ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಅವರ ಅಧಿಕಾರದ ಅವಧಿ ಮುಕ್ತಾಯಗೊಳ್ಳಲಿದೆ. ಸೋಮವಾರ ಅವರಿಗೆ ರಾಜ್ಯಸಭೆಯನ್ನು ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಸಂಸದರು ಅವರ ಕುರಿತಾಗಿ ಮಾತನಾಡಿದರು.

ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಮಾತನಾಡಿದರು. ಕರ್ನಾಟಕದೊಂದಿಗೆ ವೆಂಕಯ್ಯ ನಾಯ್ಡು ಅವರ ಸಂಬಂಧದ ಬಗ್ಗೆ ಕನ್ನಡದಲ್ಲಿಯೇ ಮಾತನಾಡಿದರು. ಉಪರಾಷ್ಟ್ರಪತಿಯಾಗಿ ಅವರು ಅಧಿಕಾರಕ್ಕೇರುವ ಮುನ್ನ ಬೆಂಗಳೂರಿನ ರೇಸ್‌ಕೋರ್ಸ್ ಬಳಿಯ ಪುಟ್ಟ ಜನಾರ್ಧನ ಹೋಟೆಲ್‌ನಲ್ಲಿ ಉಪಹಾರ ಸೇವಿಸುತ್ತಿದ್ದ ಬಗ್ಗೆ ನೆನಪಿಸಿಕೊಂಡರು.

ಎತ್ತು ತಿವಿದು ಸಾವು ಕಂಡಿದ್ರು ತಾಯಿ, ಅಮ್ಮನ ಕತೆ ಕೇಳಿ ಸದನದಲ್ಲೇ ಅತ್ತುಬಿಟ್ಟ ಉಪರಾಷ್ಟ್ರಪತಿ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಂತ್ರಿಯಾಗಿದ್ದ ವೇಳೆ ಬೆಂಗಳೂರಿಗೆ ಬಂದಾಗ ಈ ಹೋಟೆಲ್‌ಗೆ ಹೋಗುತ್ತಿದ್ದರು. ಉಪರಾಷ್ಟ್ರಪತಿ ಆದ ಬಳಿಕ ಭದ್ರತಾ ಕಾರಣದಿಂದಾಗಿ ತಪ್ಪಿಹೋಯಿತು ಎನ್ನುವುದನ್ನು ಸ್ಮರಿಸಿಕೊಂಡರು.