ಕೇಂದ್ರ ಸಚಿವ ನಾರಾಯಣಸ್ವಾಮಿ ಯಡವಟ್ಟು: ಹಬ್ಬದ ಖುಷಿಯಲ್ಲಿದ್ದ ಕುಟುಂಬಸ್ಥರು ಕಣ್ಣೀರು

ಗದಗನಲ್ಲಿ ನಡೆದ ಜನಾಶೀರ್ವಾದ ಕಾರ್ಯಕ್ರಮದ ವೇಳೆ ಅತ್ಯುತ್ಸಾಹದಲ್ಲಿದ್ದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸೂಕ್ತ ಮಾಹಿತಿ ಪಡೆದುಕೊಳ್ಳದೇ ಭಾರಿ ಯಡವಟ್ಟು ಮಾಡಿಕೊಂಡಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಗದಗ, (ಆ.20): ಗದಗನಲ್ಲಿ ನಡೆದ ಜನಾಶೀರ್ವಾದ ಕಾರ್ಯಕ್ರಮದ ವೇಳೆ ಅತ್ಯುತ್ಸಾಹದಲ್ಲಿದ್ದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸೂಕ್ತ ಮಾಹಿತಿ ಪಡೆದುಕೊಳ್ಳದೇ ಭಾರಿ ಯಡವಟ್ಟು ಮಾಡಿಕೊಂಡಿಕೊಂಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆ ಯಡವಟ್ಟು ಮಾಡಿಕೊಂಡ ಡಿಕೆಶಿ, ಜಮೀರ್ ಅಹ್ಮದ್

ಹೌದು... ಮೃತಪಟ್ಟ ಯೋಧನ ಕುಟುಂಬದ ನಿವಾಸಕ್ಕೆ ಭೇಟಿ‌ ನೀಡಬೇಕಿದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಜೀವಂತ ಸೈನಿಕನ ಮನೆಗೆ ತೆರಳಿ ಕುಟುಂಬಕ್ಕೆ‌ ಸಾಂತ್ವನ ಹೇಳಿದ್ದಾರೆ. ವಿಷಯ ತಿಳಿದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಈ ಮೂಲಕ ಸಚಿವ ನಾರಾಯಣಸ್ವಾಮಿ ಅವರು ಯೋಧನ ಕುಟುಂಬದವರ ಮನೆಯ ಹಬ್ಬದ ವಾತಾವರಣವನ್ನೇ ಕಸಿದುಕೊಂಡಿದ್ದಾರೆ.

Related Video