ಅಂದು ಕುಮಾರಣ್ಣನಿಗಾಗಿ ಬಸ್ ಓಡಿಸಿದ್ದ ಜಮೀರ್: ಇಂದು ದೋಸ್ತ್ ನಹೀ ದುಷ್ಮನ್, ಕೆರಳಿದ ಕುಮಾರ!

ಎಚ್ಡಿಕೆ ವಿರುದ್ಧ ಜಮೀರ್ ಕೊಟ್ಟ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕರೇ ಒಬ್ರು ಹೊಸ ಬಾಂಬ್ ಸಿಡಿಸಿದ್ದಾರೆ. ಜಮೀರ್ ಕೊಟ್ಟಂತಹ ಹೇಳಿಕೆಯ ಹಿಂದೆ ಕುಮಾರಸ್ವಾಮಿ ಅವರೇ ಇದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು(ನ.17): ಅಂದು ಕುಮಾರಣ್ಣನಿಗಾಗಿ ಬಸ್ ಓಡಿಸಿದ್ದ ಜಮೀರ್…ಇಂದು ದೋಸ್ತ್ ನಹೀ ದುಷ್ಮನ್.. ಕೆರಳಿದ ಕುಮಾರ. ಅಂದು, ಆ ನಾಲ್ವರ ತಂಡಕ್ಕೆ ಕುಮಾರಣ್ಣನೇ ಕ್ಯಾಪ್ಟನ್. ಇಂದು ನೀವೊಂದು ತೀರ.. ನಾನೊಂದು ತೀರ.. ಮುರಿದ ಸ್ನೇಹ..! ಕೊಚ್ಚೆ.. ಪಂಚರ್ ಶಾಪ್.. ದಳಪತಿ ಹೀಗಂದಿದ್ದೇಕೆ..? ಕರಿಯ ಎಂದು ಕರೆದ ಜಮೀರ್ಗೆ ಹೇಗಿತ್ತು ಕುಮಾರಸ್ವಾಮಿಯ ಮೊದಲ ಕೌಂಟರ್.? ಜಮೀರ್ ಜೊತೆಗೆ ಮತ್ತೊಂದಿಷ್ಟು ಮಂದಿಯನ್ನ ಜಾಡಿಸಿದ್ದೇಕೆ ಎಚ್ಡಿಕೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಕರಾಳ ದುಷ್ಮನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರಿಯ-ಕುಳ್ಳ ಗಲಾಟೆ ಮಧ್ಯೆ, ಚನ್ನಪಟ್ಟಣದ ಸೈನಿಕನಿಗೆ ಸೋಲಿನ ಭಯ ಕಾಡ್ತಿದ್ಯಾ..? ಅಥವಾ ಸಿ.ಪಿ.ಯೋಗೇಶ್ವರ್ ಆಡಿರುವ ಆತಂಕದ ಮಾತುಗಳ ಹಿಂದಿನ ಅಸಲಿಯತ್ತೇ ಬೇರೆ ಇದ್ಯಾ.?. ಫಲಿತಾಂಶಕ್ಕೂ ಮೊದಲೇ ಸಿ.ಪಿ.ಯೋಗೇಶ್ವರ್ ಸೋಲೊಪ್ಪಿಕೊಂಡು ಬಿಟ್ರಾ..? ಇಂಥಹದೊಂದು ಪ್ರಶ್ನೆಗೆ ಕಾರಣವಾಗಿರೋದು ಯೋಗೇಶ್ವರ್ ಅವರ ನಡೆ ಹಾಗೂ ನುಡಿ. ಆದ್ರಿಲ್ಲಿ ಯೋಗೇಶ್ವರ್ ಬೇರೆಯದ್ದೇ ಆಟ ಕಟ್ಟಿದ್ದಾರೆ ಅನ್ನೋ ಮಾತುಗಳು ಈಗ ಕೇಳಿ ಬರ್ತಿವೆ. ಕೈ ನಾಯಕರೇ ಆ ಮಾತುಗಳನ್ನ ಆಡ್ತಿದ್ದಾರೆ.

ಜಮೀರ್ ವಿವಾದಿತ ಹೇಳಿಕೆಗೆ ಚುನಾವಣೆ ಮುಗಿದ ಬಳಿಕ ಹೆಚ್‌ಡಿಕೆ ತಿರುಗೇಟು!

23ಕ್ಕೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತೆ ಅನ್ನೋದೇನೋ ಹೌದು, ಆದ್ರೆ, ಈ ಮಧ್ಯೆ ಜಮೀರ್ ಕೊಟ್ಟ ಕರಿಯಾ ಹೇಳಿಕೆ ಹಿಂದೆ ಕುಮಾರಸ್ವಾಮಿ ಅವರೇ ಇದ್ದಾರೆ ಅನ್ನೋ ಗಂಭೀರ ಆರೋಪವನ್ನ ಕೈ ಶಾಸಕರೇ ಒಬ್ರು ಮಾಡಿದ್ದಾರೆ. ಹಾಗಿದ್ರೆ ಯಾರಾ ಶಾಸಕರು..? ಅವರು ಹೇಳಿದ್ದೇನು.? ಅಂತ ತೋರಿಸ್ತೀವಿ. 

ಎಚ್ಡಿಕೆ ವಿರುದ್ಧ ಜಮೀರ್ ಕೊಟ್ಟ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕರೇ ಒಬ್ರು ಹೊಸ ಬಾಂಬ್ ಸಿಡಿಸಿದ್ದಾರೆ. ಜಮೀರ್ ಕೊಟ್ಟಂತಹ ಹೇಳಿಕೆಯ ಹಿಂದೆ ಕುಮಾರಸ್ವಾಮಿ ಅವರೇ ಇದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. 

Related Video