ಜಮೀರ್ ವಿವಾದಿತ ಹೇಳಿಕೆಗೆ ಚುನಾವಣೆ ಮುಗಿದ ಬಳಿಕ ಹೆಚ್‌ಡಿಕೆ ತಿರುಗೇಟು!

ಚುನಾವಣೆ ಮುಗಿದ ಬಳಿಕ ಹೇಳಿಕೆಗಳಿಗೆ ಹೆಚ್‌ಡಿಕೆ ಉತ್ತರ, ವಕ್ಫ್ ವಿರುದ್ದ ಹೋರಾಟಕ್ಕೆ ಬಿಜೆಪಿ ರೆಬೆಲ್ ತಂಡ ತಯಾರಿ,ಮುಸ್ಲಿಮರ ಖಬರಸ್ತಾನ್‌ಗೆ 2,750 ಎಕರೆ ಜಮೀನು ನೀಡಲು ಸರ್ಕಾರ ತಯಾರಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ಇಲ್ಲಿದೆ.
 

Share this Video
  • FB
  • Linkdin
  • Whatsapp

ಜಮೀರ್ ಅಹಮ್ಮದ್ ವಿವಾದಿತ ಹೇಳಿಕೆ ಕುರಿತು ಉಪ ಚುನಾವಣೆ ಮುಗಿದ 2 ದಿನದ ಬಳಿಕ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಕೊಚ್ಚೆಯಲ್ಲಿದ್ದವರ ಕುರಿತು ಮಾತನಾಡುವ ಅಗತ್ಯವಿಲ್ಲ ಎಂದಿದ್ದಾರೆ. ಜಮೀರ್ ನನ್ನ ವಿರುದ್ದ ಬಳಸಿದ ಪದಗಳನ್ನು ಮೆಕ್ಕಾಗೆ ಹೋದಾಗ ನೆನಪು ಮಾಡಿಕೊಳ್ಳಲಿ ಎಂದು ಹೆಚ್‌ಡಿಕೆ ಹೇಳಿದ್ದಾರೆ. ದೇವೇಗೌಡರ ಕುಟುಂಬವನ್ನೇ ಖರೀದಿ ಮಾಡುತ್ತೇವೆ ಎಂದಿದ್ದಾರೆ. ದುಡ್ಡಿನ ಅಹಂಕಾರದಲ್ಲಿ ಮಾತನಾಡುತ್ತಿದ್ದಾರೆ. ಬಸ್ ಓಡಿಸಿ ನಿಯಮತ್ತಿನಿಂದ ಮಾಡಿದ್ದಾರಾ ದುಡ್ಡು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Related Video