ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗುಜರಿ ಹಗರಣಕ್ಕೆ ತಾರ್ಕಿಕ ಅಂತ್ಯ ಯಾವಾಗ? Brahmavar Sugar factory Scam

Share this Video
  • FB
  • Linkdin
  • Whatsapp

ಉಡುಪಿಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ 14 ಕೋಟಿ ರೂಪಾಯಿ ಗುಜರಿ ಹಗರಣಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಬಿಜೆಪಿ ಅವಧಿಯಲ್ಲಿ ನಡೆದ ಈ ಹಗರಣದ ತನಿಖೆಗೆ ಕಾಂಗ್ರೆಸ್ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಮೃದು ಧೋರಣೆ ವಿರುದ್ಧ ಹೋರಾಟಕ್ಕೆ ನಿರ್ಧರಿಸಿರುವ ಅವರು, ಆರೋಪಿಗಳಾಗಿರುವ ಅಧಿಕಾರಿಗಳ ತನಿಖೆ ನಡೆಸಲು ಸರ್ಕಾರ ಪೂರ್ವಾನುಮತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಲ್ಕು ವಿಧದ ತನಿಖೆಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿರುವ ಉಡುಪಿ ಜಿಲ್ಲಾ ರೈತ ಸಂಘ, ಪಕ್ಷಭೇದ ಮರೆತು ಅನಿರ್ದಿಷ್ಟಾವಧಿ ಹೋರಾಟಕ್ಕೆ ಸಿದ್ಧತೆ ನಡೆಸಿದೆ. ಎರಡು ದಶಕಗಳ ಹಿಂದೆ ಮುಚ್ಚುಗಡೆಯಾಗಿದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಮಷೀನ್, ಕಬ್ಬಿಣದ ಪಂಪ್, ತಳಪಾಯದ ಕಲ್ಲು ಸಹಿತ ಎಲ್ಲಾ ಸ್ಕ್ರಾಪ್ ಗಳ ಮಾರಾಟದಲ್ಲಿ ನಿಯಮಬಾಹಿರ ವಹಿವಾಟು ನಡೆದಿದ್ದು, ಸರ್ಕಾರದ ಬೊಕ್ಕಸಕ್ಕೆ ಸುಮಾರು 15 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ. 46 ಲೋಡ್ ಕಬ್ಬಿಣ ಜಿಎಸ್‌ಟಿ ಸೇರಿ 11.36 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದು ದಾಖಲಾಗಿದ್ದು, ಒಟ್ಟು 85 ಲೋಡು ಗುಜರಿ ಕಾರ್ಖಾನೆಯಿಂದ ಎತ್ತುವಳಿಯಾಗಿದ್ದು, ಅದರ ಮೌಲ್ಯ 21.92 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video