
ಉದ್ಧವ್ ಠಾಕ್ರೆ ರಾಜೀನಾಮೆ ಅಂಗೀಕಾರ, ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೆ ತಯಾರಿ!
- ಠಾಕ್ರೆ ರಾಜೀನಾಮೆ ಘೋಷಣೆ, ಸರ್ಕಾರ ಪತನ
- ಸರ್ಕಾರ ರಚಿಸಲು ದೇವೇಂದ್ರ ಫಡ್ನವಿಸ್ ತಯಾರಿ
- ಜೂ.30ಕ್ಕೆ ಶಿಂದೆ ಬಣದ ನಾಯಕರು ಮುಂಬೈಗೆ ವಾಪಸ್
ಸುಪ್ರೀಂ ಕೋರ್ಟ್ ವಿಶ್ವಾಸಮತ ಯಾಚನೆಗೆ ಸಮ್ಮತಿ ಸೂಚಿಸಿದ ಬೆನ್ನಲ್ಲೇ ಸಿಎಂ ಉದ್ದವ್ ಠಾಕ್ರೆ ಫೇಸ್‌ಬುಕ್ ಲೈವ್ ಮೂಲಕ ರಾಜೀನಾಮೆ ಘೋಷಿಸಿದ್ದಾರೆ. ವಿಶ್ವಾಸಮತ ಯಾಚನೆಗೂ ಮೊದಲೇ ಉದ್ಧವ್ ಸೋಲೋಪ್ಪಿಕೊಂಡಿದ್ದಾರೆ. ಇದರೊಂದಿಗೆ ಸರ್ಕಾರ ಪತನಗೊಂಡಿದೆ. ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ರಾಜೀನಾಮೆ ಅಂಗೀಕರಿಸಿದ್ದಾರೆ. ಇತ್ತ ಬಿಜೆಪಿ ಸರ್ಕಾರ ರಚನೆಗೆ ತಯಾರಿ ಆರಂಭಿಸಿದೆ. ದೇವೇಂದ್ರ ಫಡ್ನವಿಸ್ ಜುಲೈ 1 ರಂದು ಪದಗ್ರಹಣ ಮಾಡುವ ಸಾಧ್ಯತೆ ಇದೆ.