Karnataka BJP : ನನ್ಮಗ ಎಲ್ಲಾ ಹಾಳ್ ಮಾಡಿದ್ದಾನೆ - ಬಯಲಾಯ್ತು ಬಿಜೆಪಿ ನಾಯಕರ ಗುಸು ಗುಸು !

 ತುಮಕೂರಿನಲ್ಲಿ ನಡೆದ ಬಿಜೆಪಿ ನಾಯಕರ ಗುಸು ಗುಸು ಸಮಾಚಾರ ಇದೀಗ ರಟ್ಟಾಗಿದೆ. ಸಚಿವ ಜೆಸಿ ಮಾಧುಸ್ವಾಮಿ ವಿರುದ್ಧ ಸಂಸದ ಬಸವರಾಜ್ ಕಿಡಿ ಕಾರಿದ್ದಾರೆ

First Published Jan 6, 2022, 1:32 PM IST | Last Updated Jan 6, 2022, 1:32 PM IST

ತುಮಕೂರು (ಜ.06): ತುಮಕೂರಿನಲ್ಲಿ (Tumakuru)  ನಡೆದ ಬಿಜೆಪಿ (BJP) ನಾಯಕರ ಗುಸು ಗುಸು ಸಮಾಚಾರ ಇದೀಗ ರಟ್ಟಾಗಿದೆ. ಸಚಿವ ಜೆಸಿ ಮಾಧುಸ್ವಾಮಿ ವಿರುದ್ಧ ಸಂಸದ ಬಸವರಾಜ್ ಕಿಡಿ ಕಾರಿದ್ದು, ಮಾತೆತ್ತಿದರೆ ಹೊಡಿ ಬಡಿ ಕಡಿ ಅಂತಾನೇ. ನಮ್ಮ ಜಿಲ್ಲೆಯನ್ನು ಹಾಳ್ ಮಾಡಿದ್ದಾನೆ. ಒಂದ್ ಸೀಟ್ ಸಹ ಬರಲ್ಲ ಎಂದಿದ್ದಾರೆ. ಇದಕ್ಕೆ ಉತ್ತರವಾಗಿ ಬೈರತಿ ಬಸವರಾಜು ಈಗ ಸುಮ್ಮನಿರು ಆಮೇಲೆ ಮಾತಾಡೋಣ  ಎಂದಿದ್ದಾರೆ. 

Karnataka Politics : ರಮೇಶ್ ಜಾರಕಿಹೊಳಿ ಸಿಎಂ ಭೇಟಿ - ಕುತೂಹಲ ಮೂಡಿಸಿದ ಮೀಟಿಂಗ್

ಹೆಂಡ್ತಿ ಸೀರೆ ಒಗಿ ಹೋಗಿ ಎಂದು ಇಂಜಿನಿಯರ್‌ಗೆ ಹೇಳ್ತಾನೆ. ಇವನು ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್  ಇದ್ದ ಹಾಗೆ.  ಈ ನನ್ಮಗ ನಮ್ಮ ಮಂತ್ರಿ ಹೇಗೆ ಗೊತ್ತಾ..? ಎಂದು ಹೆಸರು ಹೇಳದೆ ಮಾತಾಡಿಕೊಂಡಿದ್ದು ರಟ್ಟಾಗಿದೆ. 

Video Top Stories