ಟ್ರಂಪ್ ಟ್ವೀಟ್‌ನಿಂದ ಯುದ್ಧ ವಿರಾಮ? ಪ್ರಿಯಾಂಕ್ ಖರ್ಗೆಯಿಂದ ಸರ್ಕಾರಕ್ಕೆ ಚಾಟಿ
ಪ್ರಿಯಾಂಕ್ ಖರ್ಗೆಯವರು, ಅಮೆರಿಕವು 'ಭಯೋತ್ಪಾದನಾ ಕೃತ್ಯ'ವನ್ನು ಖಂಡಿಸದಿರುವುದನ್ನು ಮತ್ತು ಪ್ರಧಾನಿಯವರು ಡೊನಾಲ್ಡ್ ಟ್ರಂಪ್‌ರನ್ನು 'ಸ್ನೇಹಿತ' ಎಂದು ಪರಿಗಣಿಸುವುದನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ವಿದೇಶಾಂಗ ನೀತಿಯನ್ನು ಸ್ನೇಹಿತರಲ್ಲಿ ಅಡವಿಟ್ಟಿದ್ದಾರೆಯೇ ಎಂದು ವ್ಯಂಗ್ಯವಾಡಿದ ಅವರು, 'ಯುದ್ಧ ವಿರಾಮ'ದಂತಹ ಮಹತ್ವದ ಮಾಹಿತಿ ಅಧಿಕೃತ ಮೂಲಗಳ ಬದಲು ಟ್ರಂಪ್ ಅವರ ಟ್ವೀಟ್‌ನಿಂದ ತಿಳಿಯಬೇಕಾದ ಪರಿಸ್ಥಿತಿಯನ್ನು ಟೀಕಿಸಿದ್ದಾರೆ. ಆ ಟ್ವೀಟ್‌ನಲ್ಲಿ ಭಾರತವನ್ನು ಪಾಕಿಸ್ತಾನಕ್ಕೆ ಹೋಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಭಾರತ ಎಂದಿಗೂ ಭಯೋತ್ಪಾದಕ ರಾಷ್ಟ್ರವಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knCQBs?feature=shared