Asianet Suvarna News Asianet Suvarna News

Ground Report: ಉತ್ತರ ಕನ್ನಡ ಜಿಲ್ಲೆಯಲ್ಲಿ ಟಿಕೆಟ್‌ ಫೈಟ್‌, ಪರೇಶ್‌ ಮೇಸ್ತಾ ಸಾವು ಅಸ್ತ್ರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ಡಜನ್‌ಗಟ್ಟಲೆ ಆಕಾಂಕ್ಷಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಪತ್ಯಕ್ಕೆ ಬ್ರೇಕ್‌ ಹಾಕಿದ್ದ ಬಿಜೆಪಿ ಜಿಲ್ಲೆಯ ಒಟ್ಟು 6 ಕ್ಷೇತ್ರಗಳಲ್ಲಿ 5 ಸ್ಥಾನಗಳನ್ನು ಗೆದ್ದುಕೊಂಡಿದೆ.

ಬೆಂಗಳೂರು (ನ.29) : ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ಡಜನ್‌ಗಟ್ಟಲೆ ಆಕಾಂಕ್ಷಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಪತ್ಯಕ್ಕೆ ಬ್ರೇಕ್‌ ಹಾಕಿದ್ದ ಬಿಜೆಪಿ ಜಿಲ್ಲೆಯ ಒಟ್ಟು 6 ಕ್ಷೇತ್ರಗಳಲ್ಲಿ 5 ಸ್ಥಾನಗಳನ್ನು ಗೆದ್ದುಕೊಂಡಿದೆ. ಈಗ ಪರೇಶ್‌ ಮೇಸ್ತಾ ಸಾವು ಚುನಾವಣಾ ಅಸ್ತ್ರವಾಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಕಾರವಾರ ಅಂಕೋಲಾ ತಾಲೂಕುಗಳನ್ನು ಒಳಗೊಂಡ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕಿ ರೂಪಾಲಿ ನಾಯಕ್‌ ಕಣಕ್ಕಿಳಿಯಲು ಸಿದ್ಧವಾಗಿದ್ಧಾರೆ. ಆದರೆ, ಬಿಜೆಪಿ ಸೇರಲು ಪ್ರಯತ್ನಿಸಿ ವಿಫಲವಾಗಿರುವ ಸತೀಶ್‌ ಸೈಲ್‌ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಭಟ್ಕಳದಲ್ಲಿ ಈಡಿಗರು ಕೈ ಹಿಡಿದರೆ ಶಾಸಕರಾಗುವುದು ಗ್ಯಾರಂಟಿಯಾಗಿದೆ. ಯಲ್ಲಾಪುರದಲ್ಲಿ ಸಚಿವ ಶಿವರಾಂ ಹೆಬ್ಬಾರ್‍‌ ಅವರನ್ನು ಕಟ್ಟಿ ಹಾಕುವವರು ಯಾರು? ಮೂಲ ಹಾಗೂ ಪಕ್ಷಾಂತರಗೊಂಡ ಬಿಜೆಪಿಗರ ನಡೆ ಹೇಗಿದೆ? ಒಟ್ಟಾರೆ ಜಿಲ್ಲೆಯ ಗ್ರೌಂಡ್‌ ರಿಪೋರ್ಟ್ ಬಗ್ಗೆ ನೀವೇ ನೋಡಿ.

Video Top Stories