Asianet Suvarna News Asianet Suvarna News

ಹೊಸ ಅವತಾರದಲ್ಲಿ ಮಹಾಘಬಂಧನ್: INDIA ಹಿಂದಿನ ಕಹಾನಿ

ತೃತೀಯ ರಂಗದ ಜತೆಗೆ ಯುಪಿಎ ಮರ್ಜ್‌ ಆಗಿದೆ. ಹೀಗಾಗಿ ಹೊಸ ಹೆಸರು INDIA ಅಂತ ಆಗಿದೆ. ಮೈತ್ರಿಕೂಟದ ಹೊಸ ಹೆಸರನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಕಟಿಸಿದ್ದಾರೆ. 26 ಪಕ್ಷಗಳ ಹೊಸ ಮೈತ್ರಿಕೂಟ ರಚನೆಯಾಗಿದೆ. 

ಬೆಂಗಳೂರು(ಜು.18): ಮಹಾಘಟಬಂಧನ್ ಎರಡನೇ ಸಭೆ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಮುಗಿದಿದೆ. ಯುಪಿಎ ತೃತಿಯ ರಂಗದೊಂದಿಗೆ ಮರ್ಜ್‌ ಆಗಿ ಹೊಸ ಹೆಸರನ್ನು ಪಡೆದುಕೊಂಡಿದೆ. ಮುಂಚೆ ಎನ್‌ಡಿಎ, ಯುಪಿಎ ಮತ್ತು ತೃತೀಯ ರಂಗ ಇತ್ತು. ಕಾಂಗ್ರೆಸ್ಸೇತರ ವಿರೋಧ ಪಕ್ಷಗಳು ಅವೆಲ್ಲವೂ ಸೇರಿದಂತ ಒಂದು ತೃತೀಯ ರಂಗ ಇತ್ತು. ಇದೀಗ ತೃತೀಯ ರಂಗದ ಜತೆಗೆ ಯುಪಿಎ ಮರ್ಜ್‌ ಆಗಿದೆ. ಹೀಗಾಗಿ ಹೊಸ ಹೆಸರು INDIA ಅಂತ ಆಗಿದೆ. ಮೈತ್ರಿಕೂಟದ ಹೊಸ ಹೆಸರನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಕಟಿಸಿದ್ದಾರೆ. 26 ಪಕ್ಷಗಳ ಹೊಸ ಮೈತ್ರಿಕೂಟ ರಚನೆಯಾಗಿದೆ. ನರೇಂದ್ರ ಮೋದಿಯನ್ನ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವ ಉದ್ದೇಶದೊಂದಿಗೆ INDIA ರಚನೆಯಾಗಿದೆ. 

ಭ್ರಷ್ಟಾಚಾರ ಮುಚ್ಚಿ ಹಾಕಲು ಭಷ್ಟ್ರರೆಲ್ಲಾ ಒಂದಾಗಿದ್ದಾರೆ: ಪ್ರಧಾನಿ ಕುಹಕ

Video Top Stories