
ನಕಲಿ ತಂಗಿ ತಂದ ದೌರ್ಭಾಗ್ಯ: ಬಂಗಾರಿ ಲೇಡಿ, ಬಂಡೆ ಬ್ರದರ್ ಬುಡಕ್ಕೆ ED!
ನಾನು ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು ಐಶ್ವರ್ಯ ಗೌಡ ಕೋಟಿ-ಕೋಟಿ ವಂಚನೆ ಮಾಡಿ ಸಿಕ್ಕಿಬಿದ್ದಿದ್ದರು. ಇದೀಗ ಯಾರು ತನ್ನಣ್ಣ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದಳೋ, ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ.
ಬೆಂಗಳೂರು: ಮಾಜಿ ಸಂಸದ ಡಿ.ಕೆ ಸುರೇಶ್ ಅವರ ಹೆಸರನ್ನು ಬಳಸಿಕೊಂಡು ಐಶ್ವರ್ಯ ಗೌಡ ವಂಚನೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಇದೀಗ ಜಾರಿ ನಿರ್ದೇಶನಾಲಯ ಮಾಜಿ ಸಂಸದ ಡಿ.ಕೆ ಸುರೇಶ್‌ಗೆ ಸಮನ್ಸ್ ಕೊಟ್ಟು ವಿಚಾರಣೆಗೆ ಬನ್ನಿ ಎಂದು ಕರೆದಿದೆ. ಈ ಮೊದಲು ಮತ್ತೊಬ್ಬ ಕಾಂಗ್ರೆಸ್ ನಾಯಕನಿಗೂ ಇದೇ ಪ್ರಕರಣದಲ್ಲಿ ಇ.ಡಿ ಸಮನ್ಸ್ ಕೊಟ್ಟಿತ್ತು.
ನಾನು ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು ಐಶ್ವರ್ಯ ಗೌಡ ಕೋಟಿ-ಕೋಟಿ ವಂಚನೆ ಮಾಡಿ ಸಿಕ್ಕಿಬಿದ್ದಿದ್ದರು. ಇದೀಗ ಯಾರು ತನ್ನಣ್ಣ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದಳೋ, ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ವಿಚಾರಣೆ ಮಾಡ್ಬೇಕು ಬನ್ನಿ ಅಂತ ಡಿ.ಕೆ. ಸುರೇಶ್‌ಗೆ ಸಮನ್ಸ್ ಕೊಟ್ಟಿದೆ ಇ.ಡಿ. ಅಷ್ಟಕ್ಕೂ ಅವರಿಗ್ಯಾಕೆ ಇ.ಡಿ ಸಮನ್ಸ್ ಕೊಡ್ತು? ಅದಕ್ಕೆ ಕಾರಣ ಏನು? ಬಂಗಾರಿ ಲೇಡಿಯ ವಂಚನೆ ಜಾಲ ಅವರಿಗೆ ಸಂಕಷ್ಟ ತಂದಿರೋದ್ಯಾಕೆ?