ಸಿಎಂ, ಡಿಸಿಎಂಗೆ..ಟೆನ್ಷನ್ ಮೇಲೆ ಟೆನ್ಷನ್..! ಸರ್ಕಾರಕ್ಕೆ ಸ್ವಪಕ್ಷೀಯರಿಂದಲೇ ಸವಾಲುಗಳು..!
ಸರ್ಕಾರಕ್ಕೆ ಸ್ವಪಕ್ಷೀಯರಿಂದಲೇ ಸವಾಲುಗಳು..!
ನಿಲ್ಲುತ್ತಿಲ್ಲಾ ಶಾಸಕರು VS ಸಚಿವರ ಜಂಗಿಕುಸ್ತಿ..!
ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ..?
ಕಾಂಗ್ರೆಸ್ ಸರ್ಕಾರ ತನ್ನ ಮುಂದೆ ಇರೋ ಸವಾಲುಗಳನ್ನೆಲ್ಲಾ ಸಾಲ್ವ್ ಮಾಡಿಕೊಂಡು ನಿಟ್ಟುಸಿರೋ ಬಿಡೋ ಹೊತ್ತಿಗೆ ಇನ್ನೊಂದು ಸವಾಲು ಎಂಬಂತೆ ಆಗ್ತಾ ಇದೆ. ಶಾಸಕರು ವರ್ಸಸ್ ಸಚಿವರು. ಬೆಳಗಾವಿ(belagavi) ಬಾಂಬ್..ಕಾರ್ಯಾಧ್ಯಕ್ಷರ ನೇಮಕಾತಿ ಅಸಮಾಧಾನ ಹೀಗೆ ಸಿದ್ದು ಸರ್ಕಾರಕ್ಕೆ ದಿನೇ ದಿನೇ ತಮ್ಮದೇ ನಾಯಕರುಗಳಿಂದ ತಲೆಬಿಸಿ ಏರ್ತಾ ಇದೆ. ಕರ್ನಾಟಕದ(Karnataka) ಚುಕ್ಕಾಣಿ ಹಿಡಿದ ಮೇಲೆ ಕಾಂಗ್ರೆಸ್ ಸರ್ಕಾರ ಅತ್ಯಂತ ನೆಮ್ಮದಿಯಿಂದಲೇ ಆಡಳಿತ ಮಾಡುತ್ತೆ ಅನ್ನೋ ಲೆಕ್ಕಾಚಾರವಿತ್ತು. ಯಾಕೆಂದ್ರೆ ವಿಪಕ್ಷದವರ ಆಪರೇಷನ್ ಬಾಂಬಿಗೆ ಬೆಚ್ಚದಂತಹ ದೊಡ್ಡ ಪಡೆ ಕಾಂಗ್ರೆಸ್ ಪಡೆಯಲ್ಲಿದೆ. ಬ್ಲಾಕ್ ಮೇಲ್ ಗಳನ್ನ ನೆಗ್ಲೇಟ್ ಮಾಡುವ ಧೈರ್ಯ ಸಿಕ್ಕ ಜಯದಲ್ಲಿತ್ತು. ಬಟ್ ಈಗ ವಿಪಕ್ಷಕ್ಕಿಂತ ಸ್ವಪಕ್ಷದವರೇ ಸರ್ಕಾರಕ್ಕೆ ತಲೆ ಬೇನೆ ತರ್ತಾ ಇದಾರಾ ಅನ್ನೋ ಅನುಮಾನ ಮೂಡೋಕೆ ಶುರುವಾಗಿದೆ. ಅದಕ್ಕೆ ಕಾರಣ ಬೇರೆ ಏನೂ ಅಲ್ಲ.. ದಿನ ಬೆಳಗಾದ್ರೆ ಕಾಣ್ತಿರೋ ಬಂಡಾಯದ ಕಿಡಿ. ಅಶೋಕ್ ಪಟ್ಟಣ್(Ashok Pattan)ರಾಜ್ಯ ಸರ್ಕಾರದ ಮುಖ್ಯ ಸಚೇತಕ. ಇವತ್ತು ವಿಧಾನಸೌಧಲ್ಲಿ ನಿಂತು ಮಾಧ್ಯಮಗಳ ಜೊತೆಗೆ ಮಾತನ್ನಾಡಿದ ಪಟ್ಟಣ್, ಇನ್ನು ಎರಡು ವರೆವರ್ಷದಲ್ಲಿ ಸಂಪುಟ ಬದಲಾವಣೆ ಆಗುತ್ತೆ ಅನ್ನೋ ಮಾತನ್ನಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಮೋದಿ..ಅದಾನಿ ವಿರುದ್ಧ ಗುಡುಗಿದ್ರೆ ಸಂಸದೆಗೆ ದುಡ್ಡು ಸಿಕ್ತಿತ್ತಾ..? ಬಿಜೆಪಿ ನಾಯಕನಿಂದ ಗಂಭೀರ ಆರೋಪ!