Asianet Suvarna News Asianet Suvarna News

ಟಿಕೆಟ್ ಸಿಗದಿದ್ರೂ ಬಿಜೆಪಿ ಬಿಟ್ಟೋಗಲ್ಲ ಅಂತ ಆಣೆ ಪ್ರಮಾಣ ಮಾಡಿಸಿದ ಮುನಿರತ್ನ: ವಿಡಿಯೋ ವೈರಲ್‌

ಕೋಲಾರ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಆಣೆ ಪ್ರಮಾಣ ನಡೆದಿದೆ. ಎಲ್ಲರ ಕೈ ಮುಂದಿಟ್ಟು ಆಣೆ ಪ್ರಮಾಣ ಭೋದಿಸಿರುವ ಸಚಿವ ಮುನಿರತ್ನ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

ಕೋಲಾರ(ಜ.27):  ಟಿಕೆಟ್ ಕೈ ತಪ್ಪಿದ್ರೂ ಬಿಜೆಪಿ ಪಕ್ಷ ಬಿಟ್ಟೋಗಲ್ಲ ಅಂತ ಸಚಿವ ಮುನಿರತ್ನ ಆಣೆ ಪ್ರಮಾಣ ಮಾಡಿಸಿದ್ದಾರೆ. ಹೌದು, ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಪೈಪೋಟಿ ಹೆಚ್ಚಾಗಿದೆ. ಬಂಗಾರಪೇಟೆ ತಾಲೂಕು BJP ಟಿಕೆಟ್‌ಗಾಗಿ ಮಾಜಿ ಶಾಸಕರಾದ ಎಂ. ನಾರಾಯಣಸ್ವಾಮಿ, ವೆಂಕಟಮುನಿಯಪ್ಪ ಹಾಗೂ ಬಿ.ವಿ ಮಹೇಶ್, ವಿ ಶೇಷು, ಅಮರೇಶ್ ಸೇರಿದಂತೆ 6 ಮಂದಿ ಲಾಭಿ ನಡೆಸುತ್ತಿದ್ದಾರೆ.  

ಒಂದು ಕಾಲದ ಗುರು-ಶಿಷ್ಯರು.. ಬದ್ಧವೈರಿಗಳಾಗಿದ್ದು ಯಾಕೆ?: ಏನಿದು ‘ಹಳೇ ದ್ವೇಷ, ಹೊಸ ಲೆಕ್ಕಾಚಾರ’?

ಎಂ. ನಾರಾಯಣಸ್ವಾಮಿಗೆ ಟಿಕೆಟ್ ಕೈ ತಪ್ಪಿದ್ರೆ ಜೆಡಿಎಸ್‌ಗೆ ಬೆಂಬಲ ನೀಡುವ ಭೀತಿ ಎದುರಾಗಿದೆ. 2018 ರಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಎಂ. ನಾರಾಯಣಸ್ವಾಮಿ ಬಿಜೆಪಿ ಬಿಟ್ಟು ಜೆಡಿಎಸ್‌ ಪಕ್ಷ ಸೇರ್ಪಡೆಯಾಗಿದ್ದರು. ಕಳೆದ MLC ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ವಾಪಾಸ್ ಆಗಿದ್ದರು. ಪಕ್ಷಾಂತರ ಭೀತಿ ಹಿನ್ನಲೆ ಏನೇ ಬೆಳವಣಿಗೆ ಆದರೂ  ಕೋಲಾರಮ್ಮ ದೇವಿ ಆಣೆ ಪಕ್ಷಕ್ಕೆ ದ್ರೋಹ ಮಾಡಲ್ಲ ಎಂದು ಮುನಿರತ್ನ ಆಣೆ ಮಾಡಿಸಿದ್ದಾರೆ. ಮುನಿರತ್ನ ಆಣೆ ಪ್ರಮಾಣ ಮಾಡಿಸಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಆಣೆ ಪ್ರಮಾಣದಲ್ಲಿ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ, ವರ್ತೂರು ಪ್ರಕಾಶ್, ಎಂ ನಾರಾಯಣಸ್ವಾಮಿ, ವೆಂಕಟಮುನಿಯಪ್ಪ. ಬಿ.ವಿ ಮಹೇಶ್, ಸಂಪಂಗಿ, ಮಂಜುನಾಥ್ ಹಾಗು ಹಲವರು ಭಾಗಿಯಾಗಿದ್ದರು. ಕೋಲಾರ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಆಣೆ ಪ್ರಮಾಣ ನಡೆದಿದೆ. ಎಲ್ಲರ ಕೈ ಮುಂದಿಟ್ಟು ಆಣೆ ಪ್ರಮಾಣ ಭೋದಿಸಿರುವ ಸಚಿವ ಮುನಿರತ್ನ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 
 

Video Top Stories