ಜೆಡಿಎಸ್ ಸಿಂ'ಹಾಸನ' ಕಗ್ಗಂಟು ಶಮನ, ಹಗ್ಗಜಗ್ಗಾಟದ ಕೊನೆ ಬಗ್ಗೆ ಎಚ್‌ಡಿಕೆ ಹೇಳಿದ್ದೇನು..?
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು ,ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡು ಸಭೆ ನಡೆಸಿ ಅಂತಿಮವಾಗಿ ಸ್ವರೂಪ್ ಪ್ರಕಾಶ್ ಗೆ ಟಿಕೆಟ್ ನೀಡಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು ,ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡು ಸಭೆ ನಡೆಸಿ ಅಂತಿಮವಾಗಿ ಸ್ವರೂಪ್ ಪ್ರಕಾಶ್ ಗೆ ಟಿಕೆಟ್ ನೀಡಿದ್ದಾರೆ.ಮಾಧ್ಯಮದ ಜತೆ ಮಾತನಾಡಿದ ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಎರಡನೇ ಪಟ್ಟಿ ಬಿಡುಗಡೆಯಿಂದ ಕಾರ್ಯಕರ್ತರಲ್ಲಿ ಪಕ್ಷದ ಬಗ್ಗೆ ಒಂದು ಗೌರವ, ಪಕ್ಷಕ್ಕಾಗಿ ದುಡಿಯ ಬೇಕು ಎನ್ನುವ ಪ್ರೋತ್ಸಾಹ ಪ್ರತಿಯೊಬ್ಬರಲ್ಲೂ ಮೂಡುತ್ತೆ.ಹಾಸನ ಟಿಕೆಟ್ ಗೊಂದಲ ಬಗೆರಿದಿದ್ದು ದೇವರ ಪವಾಡ, ತುಂಬಾ ದೇವರನ್ನು ನಂಬುತ್ತಾರೆ.ಇಷ್ಟು ದಿನ ಗೊಂದಲ ಗೂಡಾಗಿದ್ದ ಹಾಸನ ಟಿಕೆಟ್ ಯಾವುದೇ ಅಡ್ಡಿ ಇಲ್ಲದೆ ದೇವಿ ಕೃಪೆ ಇಂದ ಬಗೆಹರಿದಿದೆ. ರೇವಣ್ಣ ಕುಟುಂಬ ತೀರ್ಮಾನಕ್ಕೆ ಅಭಿನಂದಿಸುತ್ತೇನೆ ಎಂದು ಹೇಳಿದರು