ಎಲ್ಲಿಂದ ಶುರುವಾಯ್ತು ರಾಮುಲು-ರೆಡ್ಡಿ ಅಂತಃಕಲಹ?: 40 ವರ್ಷಗಳ ಸ್ನೇಹ.. 4 ತಿಂಗಳಿಗೇ ಹಳಸಿತಾ?

ಒಂದು ಕಾಲದ ದೋಸ್ತಿಗಳು, ಈಗ ದುಷ್ಮನ್​ಗಳಾಗಿದ್ದಾರೆ.. ಈ ದುಷ್ಮನಿ ಹಿಂದಿರೋ ಕಹಾನಿ, ಏನು ಗೊತ್ತಾ? ಎಲ್ಲವೂ ತಣ್ಣಗಾಯ್ತು ಅಂದ್ಕೊಳ್ತಾ ಇರುವಾಗ್ಲೇ, ಈ ಇಬ್ಬರು ಸ್ನೇಹಿತರ ನಡುವೆ ವಿದ್ವೇಷದ ವಿಷಜ್ವಾಲೆ ಹೊತ್ತಿಕೊಂಡಿದ್ದೇಕೆ?

Govindaraj S  | Published: Jan 25, 2025, 1:29 PM IST

ಜನಾರ್ದನ ರೆಡ್ಡಿ, ಶ್ರೀರಾಮುಲು.. ಇಬ್ಬರೂ ಕೂಡ ಆಪ್ತಮಿತ್ರರು.. ಈ ಸ್ನೇಹಿತರ ಆಟಕ್ಕೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎದ್ದಿತ್ತು.. ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿತ್ತು.. ಕಮಲಪಾಳಯದ ಘಟಾನುಘಟಿಗಳಿಗೇ ಸವಾಲು ಹಾಕಿತ್ತು. ಆದ್ರೆ ಈಗ, ಈ ಮಿತ್ರರು, ಒಬ್ಬರ ವಿರುದ್ಧ ಮತ್ತೊಬ್ಬರು ತೊಡೆ ತಟ್ತಾ ಇದಾರೆ.. ನಾನಾ ನೀನಾ ಅನ್ನೋ ಯುದ್ಧ ಆರಂಭಿಸಿದ್ದಾರೆ.. ಒಂದು ಕಾಲದ ದೋಸ್ತಿಗಳು, ಈಗ ದುಷ್ಮನ್​ಗಳಾಗಿದ್ದಾರೆ.. ಈ ದುಷ್ಮನಿ ಹಿಂದಿರೋ ಕಹಾನಿ, ಏನು ಗೊತ್ತಾ? ಎಲ್ಲವೂ ತಣ್ಣಗಾಯ್ತು ಅಂದ್ಕೊಳ್ತಾ ಇರುವಾಗ್ಲೇ, ಈ ಇಬ್ಬರು ಸ್ನೇಹಿತರ ನಡುವೆ ವಿದ್ವೇಷದ ವಿಷಜ್ವಾಲೆ ಹೊತ್ತಿಕೊಂಡಿದ್ದೇಕೆ? ಈ ನಾಯಕರ ನಡುವಿನ ವೈರತ್ವದ ಕತೆ ಏನು? ಅಸಲಿಗೆ, ಈ ಇಬ್ಬರ ರಾಜಕೀಯ ದ್ವೇಷದಾಟಕ್ಕೆ, ನಷ್ಟ ಅನುಭವಿಸೋದು ಯಾರು? 

ಲಾಭ ಪಡೆಯೋದು ಯಾರು? ರೆಡ್ಡಿ ಹಾಗೂ ರಾಮುಲು ಮಧ್ಯೆ, ಈಗ ಹುಲ್ಲು ಕಡ್ಡಿ ಹಾಕಿದ್ರೂ ಧಗಧಗ ಅಂತ ಬೆಂಕಿ ಹೊತ್ತಿಕೊಳ್ಳತ್ತೆ.. ಅಂಥದ್ದೊಂದು ಸ್ಥಿತಿ ನಿರ್ಮಾಣವಾಗಿದ್ದು ಬೈ ಎಲೆಕ್ಷನ್ ಸೋಲಿನ ಬಳಿಕ.. ಅಷ್ಟಕ್ಕೂ ಆ ಉಪಚುನಾವಣೇಲಿ ಆಗಿದ್ದೇನು? ಈಗ ಆಗ್ತಾ ಇರೋದೇನು? ಅದರ ಪರಿಣಾಮ ಏನು? ಅದೆಲ್ಲದರ ವಿವರ ಇಲ್ಲಿದೆ. ರೆಡ್ಡಿ ರಾಮುಲು ನಡುವಿನ ಮನಸ್ತಾಪ, ಈಗ ಮತ್ತೊಂದು ಹಂತ ತಲುಪಿದೆ.. ಅದರ ನೇರಪರಿಣಾಮ ಆಗೋದು, ರಾಜ್ಯ ಬಿಜೆಪಿ ಮೇಲೆ.. ಅದ್ಯಾಕೆ ಗೊತ್ತಾ?. ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಅಂತಿದ್ದ ರೆಡ್ಡಿ ರಾಮುಲು ಮಧ್ಯೆ, ದ್ವೇಷಾಸೂಯೆಯ ರಾಜಕೀಯ ಉದ್ಭವಿಸಿದೆ.. ಸದ್ಯಕ್ಕಿದು ತಣ್ಣಗಾಗೋ ಸಣ್ಣ ಸುಳಿವೂ ಇಲ್ಲ., ಇದರಿಂದ ಕಷ್ಟ ಯಾರಿಗೆ? ಏನು ನಷ್ಟ?

Read More...