Asianet Suvarna Special ಕೈ-ಕೈ ಮಿಲಾಯಿಸುವ ಹಂತಕ್ಕೆ ಡಿಕೆಶಿ-ಈಶ್ವರಪ್ಪ, ಅಷ್ಟಕ್ಕೂ ಆಗಿದ್ದೇನು? ವೈಯಕ್ತಿಕ ದಾಳಿಗೆ ಕಾರಣವೇನು?
ಸದನದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ನಡೆದ ಘರ್ಷಣೆ ಜಾಪ್ರಭುತ್ವವನ್ನೇ ಅಣಕಿಸುವಂತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಚಿವ ಕೆಎಸ್ ಈಶ್ವರಪ್ಪ ನಡುವೆ ನಡೆದ ಜಟಾಪಟಿ ಇಡೀ ಸದವನ್ನೇ ಬಲಿ ತೆಗೆದುಕೊಂಡಿದೆ.
ಬೆಂಗಳೂರು, (ಫೆ.17): ಸದನದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ನಡೆದ ಘರ್ಷಣೆ ಜಾಪ್ರಭುತ್ವವನ್ನೇ ಅಣಕಿಸುವಂತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಚಿವ ಕೆಎಸ್ ಈಶ್ವರಪ್ಪ ನಡುವೆ ನಡೆದ ಜಟಾಪಟಿ ಇಡೀ ಸದವನ್ನೇ ಬಲಿ ತೆಗೆದುಕೊಂಡಿದೆ.
KS Eshwarappa Statement : ಅಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ಚಿಂತನೆ
ವಿಧಾನಸಭೆ ಸ್ಪೀಕರ್ ಕಚೇರಿಯಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದ್ದು ಸದನದಲ್ಲಿ ಧರಣಿ ಮುಂದುವರಿಸಲು ಪ್ರತಿಪಕ್ಷ ಕಾಂಗ್ರೆಸ್ ತೀರ್ಮಾನಿಸಿದೆ. ವಿಧಾನಸಭೆ ಪುನರಾರಂಭವಾದ ನಂತರ ಕಾಂಗ್ರೆಸ್ ಶಾಸಕರು ರಾಷ್ಟ್ರಧ್ವಜ ಹಿಡಿದು ಕಲಾಪಕ್ಕೆ ಹಾಜರಾದರು. ಈಶ್ವರಪ್ಪ ವಿರುದ್ಧ ಬಿಗಿ ನಿಲುವು ತಾಳಲು ನಿರ್ಧರಿಸಿರುವ ಕಾಂಗ್ರೆಸ್ ಸದಸ್ಯರು ಒಕ್ಕೊರಲಿನಿಂದ ಪ್ರತಿಭಟನೆಗೆ ಮುಂದಾದರು. ಇದಕ್ಕೂ ಮೊದಲು ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿಲುವಳಿ ಸೂಚನೆ ಸಂಬಂಧ ಎರಡೂ ಪಕ್ಷದ ಶಾಸಕರ ಸಂಧಾನ ಸಭೆ ನಡೆಸಿದರು. ಆದ್ರೆ, ಅದು ಸಕ್ಸಸ್ ಆಗಿಲ್ಲ.
ಅಷ್ಟಕ್ಕೂ ಆಗಿದ್ದೇನು? ವೈಯಕ್ತಿಕವಾಗಿ ದಾಳಿ ಮಾಡುವುದಕ್ಕೆ ಕಾರಣವೇನು? ಸದನದೊಳ್ ಕದನ ರೀತಿ ಸೀನ್ ಕ್ರಿಯೇಟ್ ಆಗಿದ್ದೇಗೆ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್.....