Asianet Suvarna News Asianet Suvarna News

ಕುಮಾರಸ್ವಾಮಿಯಿಂದ ಅತ್ಯಾಪ್ತ ಶಾಸಕರು ದೂರ-ದೂರ, ದಳದಲ್ಲಿ ದಳವಾಯಿ ಅಂತರ್ ಯುದ್ಧ

ಹಾನಗಲ್ ಹಾಗೂ ಸಿಂದಗಿ ಉಪ ಕದನದ ರಣಾಂಗಣದಲ್ಲಿ ಪ್ರಚಾರದ ಅಬ್ಬರ, ಆರ್ಭಟದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮೂರು ಪಕ್ಷಗಳ ಅತಿರಥರು, ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆದ್ರೆ, ಜೆಡಿಎಸ್ ನಾಯಕ ಕುಮಾರಸ್ವಾಮಿ ಹಿಂದೆ ಸೈನ್ಯವೇ ಇಲ್ಲ.

First Published Oct 22, 2021, 10:17 AM IST | Last Updated Oct 22, 2021, 11:17 AM IST

ಬೆಂಗಳೂರು, (ಅ.22): ಹಾನಗಲ್ ಹಾಗೂ ಸಿಂದಗಿ ಉಪ ಕದನದ ರಣಾಂಗಣದಲ್ಲಿ ಪ್ರಚಾರದ ಅಬ್ಬರ, ಆರ್ಭಟದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮೂರು ಪಕ್ಷಗಳ ಅತಿರಥರು, ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. 

ಬೈ ಎಲೆಕ್ಷನ್ ಅಖಾಡದಲ್ಲಿ 'ಜನನಾಯಕರ' ಬಾಯಲ್ಲಿ ಹಳಿ ತಪ್ಪಿದ ಮಾತುಗಳು!

 ಕ್ಯಾಂಪೇನ್​​​ನಲ್ಲಿ ಕಾಂಗ್ರೆಸ್​​, ಜೆಡಿಎಸ್ ಮತ್ತು ಬಿಜೆಪಿ ಪೈಪೋಟಿಯಲ್ಲಿದ್ದು, ಘಟಾನುಘಟಿ ನಾಯಕರುಗಳು ತಮ್ಮ ಅಭ್ಯರ್ಥಿ ಗೆಲುವಿಗಾಗಿ ಆಲಿಗೆ ಚಕ್ರಕಟ್ಟಿಕೊಂಡುವರಂತೆ ಹಳ್ಳಿ-ಹಳ್ಳಿಗಳಿಗೆ ಭೇಟಿ ನೀಡಿ ಮತ ಬೇಟೆ ಮಾಡುತ್ತಿದ್ದಾರೆ. ಆದ್ರೆ, ಜೆಡಿಎಸ್ ನಾಯಕ ಕುಮಾರಸ್ವಾಮಿ ಹಿಂದೆ ಸೈನ್ಯವೇ ಇಲ್ಲ.