
ಮೂರು ತಿಂಗಳ ಮಹಾಮೌನಕ್ಕೆ ಜಾರಿದ ಕನಕಾಧಿಪತಿ! ಮಹಾ ಗುರಿ ತಲುಪಲು ಮೌನವ್ಯೂಹ ಹೆಣೆದ ಕನಕವೀರ!
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೂರು ತಿಂಗಳಿನಿಂದ ಮಹಾಮೌನಕ್ಕೆ ಜಾರಿದ್ದಾರೆ. ರಾಜಕೀಯ ಕನಸು ಈಡೇರಿಸಿಕೊಳ್ಳಲು ಕಠಿಣ ರಾಜಕೀಯ ವ್ಯೂಹ ರೂಪಿಸಿದ್ದಾರೆ ಎನ್ನಲಾಗಿದೆ. ವಿವಾದಗಳಿಂದ ದೂರ ಉಳಿದು ಮೌನವನ್ನೇ ಅಸ್ತ್ರವಾಗಿಸಿಕೊಂಡಿದ್ದಾರೆ.
ಬೆಂಗಳೂರು (ಸೆ. 13): ಕನಕಪುರ ಬಂಡೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೂರು ತಿಂಗಳ 'ಮಹಾಮೌನ'ಕ್ಕೆ ಜಾರಿದ್ದಾರೆ. ರಾಜಕೀಯ ವಲಯದಲ್ಲಿ ಈ ಮೌನವು ಹಲವು ಚರ್ಚೆಗಳಿಗೆ ಕಾರಣವಾಗಿದ್ದು, ಇದು ತಮ್ಮ ಅತಿ ದೊಡ್ಡ ರಾಜಕೀಯ ಕನಸನ್ನು ಈಡೇರಿಸಿಕೊಳ್ಳುವ ದೃಷ್ಟಿಯಿಂದ ರೂಪಿಸಿದ ಒಂದು ಕಠಿಣ ವ್ಯೂಹ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಕಾಂಗ್ರೆಸ್ ಮಾಜಿ ನಾಯಕಿ ಜೊತೆ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಟ್ವಿಟ್ ಜಟಾಪಟಿ!
ಸಾಮಾನ್ಯವಾಗಿ ರಾಜಕೀಯ ವಿವಾದಗಳ ಕೇಂದ್ರಬಿಂದುವಾಗುತ್ತಿದ್ದ ಡಿ.ಕೆ. ಶಿವಕುಮಾರ್, ಇತ್ತೀಚೆಗೆ ಯಾವುದೇ ವಿವಾದಗಳಿಗೆ ಪ್ರತಿಕ್ರಿಯಿಸದೆ ಮೌನಕ್ಕೆ ಶರಣಾಗಿದ್ದಾರೆ.
ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳು ಒಂದು ತಪ್ಪು ಹೆಜ್ಜೆಯನ್ನಿಡಲು ಕಾಯುತ್ತಿದ್ದಾರೆ ಎಂಬುದನ್ನು ಅರಿತ ಅವರು, ತಮ್ಮ ಮಹತ್ವಾಕಾಂಕ್ಷೆಯ ಯೋಜನೆಗೆ ಯಾವುದೇ ಅಡ್ಡಿಯಾಗದಂತೆ ಈ ಮೌನಾಸ್ತ್ರವನ್ನು ಬಳಸುತ್ತಿದ್ದಾರೆ. ಇದು ಮಾತು ಬೆಳ್ಳಿ, ಮೌನ ಬಂಗಾರ ಎಂಬಂತೆ, ತಮ್ಮ ವಿರೋಧಿಗಳಿಗೆ ಉತ್ತರ ನೀಡಲು ಮೌನವನ್ನೇ ಆರಿಸಿಕೊಂಡಿದ್ದಾರೆ.