Suvarna Special: 100 ಶಾಸಕರ ಶಕ್ತಿ ರಹಸ್ಯ: ಡಿಕೆಶಿ ಜಾತಕದಲ್ಲಿದ್ಯಂತೆ ಸಿಎಂ ಯೋಗ.. ರಾಜ ಸಿಂಹಾಸನ ಭಾಗ್ಯ!

ಡಿಕೆ ಶಿವಕುಮಾರ್ ಅವರ ಮೌನದ ಹಿಂದಿನ ರಹಸ್ಯವೇನು? ಸಿಎಂ ಸ್ಥಾನಕ್ಕೇರಲು ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದಾರೆಯೇ? ಭವಿಷ್ಯ ನುಡಿದಂತೆ ಡಿಕೆಶಿ ಮುಖ್ಯಮಂತ್ರಿಯಾಗುವರೇ?

Share this Video
  • FB
  • Linkdin
  • Whatsapp

ಬೆಂಗಳೂರು (ಜು.2): ಸಿಂಹಾಸನ, ಸಂಘರ್ಷ, ಬಣ ಬಡಿದಾಟ, ಯುದ್ಧ. ಈಗ ಮುಖ್ಯಮಂತ್ರಿಗಳ ಬಾಯಲ್ಲಿ ಒಗ್ಗಟ್ಟಿನ ಮಂತ್ರ. ಡಿಕೆ ಬಣದ ಶಾಸಕರಿಂದ ಹೊಸ ದಾಳ. ಪಟ್ಟಾಭಿಷೇಕಕ್ಕೆ ನವೆಂಬರ್ ಮುಹೂರ್ತ. ಇಷ್ಟೆಲ್ಲಾ ಆಗ್ತಾ ಇದ್ರೂ ಡಿಕೆ ಶಿವಕುಮಾರ್ ಅವರದ್ದು ಮಾತ್ರ ಮಹಾಮೌನ.

ಹಾಗಾದರೆ ಡಿಕೆ ಶಿವಕುಮಾರ್‌ ಮೌನದ ಗುಟ್ಟೇನು..? ಒಂದು ಹೆಜ್ಜೆ ಹಿಂದಿಟ್ಟು ಅಸಲಿ ಆಟಕ್ಕೆ ರೆಡಿಯಾಗ್ತಾ ಇದ್ದಾರೆಯೇ? ಸಿಎಂ ಸಿಂಹಾಸನಕ್ಕೇರಲು ತೆರೆಮರೆಯಲ್ಲಿ ಪ್ಲಾನ್ ರೆಡಿಯಾಗ್ತಾ ಇದ್ಯಾ..? ಬಂಡೆ ಮೌನದ ಅಸಲಿ ರಹಸ್ಯವನ್ನು ಅನ್ನೋ ಕುತೂಹಲ ರಾಜಕೀಯ ವಲಯದಲ್ಲಿ ಚರ್ಚೆಯಲ್ಲಿದೆ.

ಡಿಕೆ ಶಿವಕುಮಾರ್ ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಆಗ್ತಾರಾ? ಈ ಪ್ರಶ್ನೆಗೆ ಉತ್ತರಿಸಬೇಕಿರೋದು ಕಾಂಗ್ರೆಸ್ ಹೈಕಮಾಂಡ್. ಆದರೆ, ನವೆಂಬರ್ 26ರ ಬಳಿಕ ಡಿಕೆಶಿ ಸಿಎಂ ಆಗೋದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ವಂತೆ. ಡಿಕೆಶಿಯವರಿಗೆ ಸಿಎಂ ಆಗೋ ಯೋಗ ಇದ್ದೇ ಇದೆ. 2031ರವರೆಗೆ ಅವ್ರು ರಾಜನಂತೆ ಇರ್ತಾರಂತೆ.. ಹೀಗಂತ ಹೇಳ್ತಾ ಇದೆ ಅದೊಂದು ಸ್ಫೋಟಕ ಭವಿಷ್ಯ. ಅಷ್ಟಕ್ಕೂ ಏನಿದರ ಅಸಲಿಯತ್ತು..?

Related Video