suvarna special: ಗೌಡರ ಕುಟುಂಬ Vs ಡಿಕೆಶಿ ಜಿದ್ದಾಜಿದ್ದಿ ಹಿಂದಿದೆ ರೋಚಕ ಚರಿತ್ರೆ..!

ರಾಜ್ಯದಲ್ಲಿ ಮಂಡ್ಯ ಆಯ್ತು.. ನಿಖಿಲ್‌ ಕುಮಾರಸ್ವಾಮಿಗೆ ಈಗ ರಾಮನಗರ ಖೆಡ್ಡಾ..! ಡಿಕೆ ಚಕ್ರವ್ಯೂಹದಲ್ಲಿ ಬಂಧಿಯಾಗ್ತಾರಾ ಆಧುನಿಕ ಅಭಿಮನ್ಯು..? ಎಚ್‌ಡಿಕೆ ಮಗ Vs ಡಿ.ಕೆ ಬ್ರದರ್‌. ರಣರಂಗವಾಗಲಿದ್ಯಾ ರಾಮನಗರ..? 

Share this Video
  • FB
  • Linkdin
  • Whatsapp

ರಾಮನಗರ (ಮಾ.15): ರಾಜ್ಯದಲ್ಲಿ ಮಂಡ್ಯ ಆಯ್ತು.. ನಿಖಿಲ್‌ ಕುಮಾರಸ್ವಾಮಿಗೆ ಈಗ ರಾಮನಗರ ಖೆಡ್ಡಾ..! ಡಿಕೆ ಚಕ್ರವ್ಯೂಹದಲ್ಲಿ ಬಂಧಿಯಾಗ್ತಾರಾ ಆಧುನಿಕ ಅಭಿಮನ್ಯು..? ಎಚ್‌ಡಿಕೆ ಮಗ Vs ಡಿ.ಕೆ ಬ್ರದರ್‌. ರಣರಂಗವಾಗಲಿದ್ಯಾ ರಾಮನಗರ..? 

ಲೋಕಸಭಾ ಚುನಾವಣೆಯ ವೇಳೆ ಮಂಡ್ಯ ಚಕ್ರವ್ಯೂಹದಲ್ಲಿ ಬಂಧಿಯಾಗಿದ್ದ ಆಧುನಿಕ ಅಭಿಮನ್ಯುವಿನ ಸುತ್ತ ಈಗ ರಾಮನಗರ ಚಕ್ರವ್ಯೂಹ ಸಿದ್ಧವಾಗಿದೆ. ಈ ಚಕ್ರವ್ಯೂಹದ ಸೇನಾಪತಿ ಕಾಂಗ್ರೆಸ್ ಮಹಾ ದಂಡನಾಯಕ ಡಿಕೆ ಶಿವಕುಮಾರ್. ರಾಮನಗರ ರಣರಂಗದಲ್ಲಿ ಗೌಡರ ಮೊಮ್ಮಗನಿಗೆ ಶಾಕ್ ಕೊಡಲು ರೆಡಿಯಾಗ್ತಿದ್ದಾರೆ ಡಿಕೆ ಬ್ರದರ್ಸ್. ಕುಮಾರಸ್ವಾಮಿ ಮಗನ ವಿರುದ್ಧ ಡಿಕೆ ಸಹೋದರನೇ ಕಾಂಗ್ರೆಸ್ ಕ್ಯಾಂಡಿಡೇಟ್. ರಾಮನಗರ ರಣರಂಗದಿಂದ ಎದ್ದು ಬಂದಿರೋ ಸುನಾಮಿ ಸುದ್ದಿಯ ಇಂಟ್ರೆಸ್ಟಿಂಗ್ ಎಪಿಸೋಡ್ ಇಲ್ಲಿದೆ ನೋಡಿ.

ಮಾ.27ರಿಂದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್‌ ಪರೀಕ್ಷೆ: ಹೈಕೋರ್ಟ್ ಆದೇಶದಲ್ಲಿ ಖುಷಿ ವಿಚಾರವೂ ಇದೆ

ದೇವೇಗೌಡರ ಕುಟುಂಬ ಮತ್ತು ಡಿಕೆ ಶಿವಕುಮಾರ್ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ದೊಡ್ಡ ಇತಿಹಾಸವೇ ಇದೆ. ಅಷ್ಟಕ್ಕೂ ಗೌಡರ ಫ್ಯಾಮಿಲಿ Vs ಡಿಕೆಶಿ ಜಿದ್ದಾಜಿದ್ದಿ ಹಿಂದಿನ ಚರಿತ್ರೆ ಎಂಥದ್ದು ಗೊತ್ತಾ..? ಆ ಚರಿತ್ರೆಯಲ್ಲಿ ಹೊಸ ಅಧ್ಯಾಯಕ್ಕೆ ರಾಮನಗರ ರಣರಂಗ ಸಾಕ್ಷಿಯಾಗುತ್ತಾ..? ರಾಮನಗರ ರಣರಂಗದಲ್ಲಿ ಕುಮಾರಸ್ವಾಮಿ ಮಗನ ವಿರುದ್ಧ ಸಹೋದರನನ್ನೇ ಕಣಕ್ಕಿಳಿಸುವ ಡಿಕೆಶಿ ಪ್ಲಾನ್ ಹಿಂದೆ ಸ್ಪಷ್ಟ ರಾಜಕೀಯ ಲೆಕ್ಕಾಚಾರ ಅಡಗಿದೆ. ಇದು ಗೌಡರ ಕೋಟೆಯನ್ನು ಕಬ್ಜಾ ಮಾಡಲು ಡಿಕೆ ಸಾಹೇಬ ಹೆಣೆದಿರೋ ರೋಚಕ ತಂತ್ರಗಾರಿಕೆ.

ಮಂಡ್ಯ ಚಕ್ರವ್ಯೂಹದಲ್ಲಿ ಬಂಧಿಯಾಗಿದ್ದ ಗೌಡರ ಮೊಮ್ಮಗ, ರಾಮನಗರದಿಂದ ಗೆದ್ದು ಶಾಸಕನಾಗೋ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಸಂಸದ ಡಿಕೆ ಸುರೇಶ್ ರಾಮನಗರದಿಂದ ಸ್ಪರ್ಧಿಸಿದ್ರೆ ನಿಖಿಲ್ ಕುಮಾರಸ್ವಾಮಿಗೆ ಮತ್ತೊಂದು ಚಕ್ರವ್ಯೂಹ ಎದುರಾಗೋದು ಗ್ಯಾರಂಟಿ ಆಗಿದೆ.

Related Video