ಟಿಕೆಟ್ ಕಾಳಗದಲ್ಲಿ ನುಗ್ಗಿ ಬಂತು ಜಾತಿ ಮಿಸೈಲ್..!

ಟಿಕೆಟ್ ಕಾಳಗದಲ್ಲಿ ನುಗ್ಗಿ ಬಂತು ಜಾತಿ ಮಿಸೈಲ್..! ಲಿಂಗಾಯತ.. ಒಕ್ಕಲಿಗ.. ಕುರುಬ.. ಮುಸ್ಲಿಮ್, ದಲಿತ..! ಒಬ್ಬೊಬ್ಬರದ್ದು ಒಂದೊಂದು ನಂಬರ್ ಗೇಮ್..! ಯಾರ ಡಿಮ್ಯಾಂಡ್ ಏನು..?
 

First Published Mar 9, 2023, 7:21 PM IST | Last Updated Mar 9, 2023, 7:21 PM IST

ಬೆಂಗಳೂರು (ಮಾ.9): ಚುನಾವಣೆಗಳು ನಡೆಯೋದು ಜಾತಿ ಆಧಾರದ ಮೇಲೆ ಅನ್ನೋದು ಸಾರ್ವಕಾಲಿಕ ಸತ್ಯ. ಚುನಾವಣೆಯಲ್ಲಿ ಯಾವ ಸಮುದಾಯದ ಎಷ್ಟು ಶಾಸಕರು ಆಯ್ಕೆಯಾಗ್ತಾರೆ ಅನ್ನೋದು ಜನರಿಗಿರೋ ಸಹಜ ಕುತೂಹಲ. ಅಂತಹ ಕುತೂಹಲ ಮತ್ತೆ ಗರಿಗೆದರಿ ನಿಂತಿದೆ. ಟಿಕೆಟ್ ಕಾಳಗದಲ್ಲಿ ದೊಡ್ಡ ಸಮುದಾಯಗಳ ಮಧ್ಯೆ ಪೈಪೋಟಿ ಶುರುವಾಗಿದೆ. ಜಾತಿ ನೋಡಿ ಟಿಕೆಟ್ ಕೊಡಿ ಅನ್ನೋ ಕೂಗು ಎದ್ದು ಬಿಟ್ಟಿದೆ. ಹಾಗಾದ್ರೆ ಯಾರ ಕೂಗು ಜೋರು..? ಯಾರ ಡಿಮ್ಯಾಂಡ್ ಎಷ್ಟು..?

224ರ ಪೈಕಿ 68 ಕ್ಷೇತ್ರಗಳಲ್ಲಿ  ಟಿಕೆಟ್ ನೀಡ್ಬೇಕು ಅಂತ ಕಾಂಗ್ರೆಸ್'ನ ವೀರಶೈವ-ಲಿಂಗಾಯತ ನಾಯಕರು ಪಟ್ಟು ಹಿಡಿದಿದ್ದಾರೆ. ಮೂರೂ ಪಕ್ಷಗಳಿಂದ ಒಟ್ಟು 40 ಟಿಕೆಟ್'ಗಳಿಗೆ ಕುರುಬ ಸಮುದಾಯ ಪಟ್ಟು ಹಾಕಿ ಕೂತಿದೆ. ಟಿಕೆಟ್ ಕಾಳಗದಲ್ಲಿ ಒಕ್ಕಲಿಗ ಸಮುದಾಯದ ನಡೆ ಏನು..? ಮುಸ್ಲಿಂ ಸಮುದಾಯ ಎಷ್ಟು ಟಿಕೆಟ್'ಗಳಿಗೆ ಬೇಡಿಕೆ ಇಟ್ಟಿದೆ..? 

ಕರ್ನಾಟಕ ಚುನಾವಣಾ ಪೂರ್ವತಯಾರಿ ಪರಿವೀಕ್ಷಣೆಗೆ ಬಂದ ಮುಖ್ಯ ಚುನಾವಣಾ ಆಯುಕ್ತ ನೇತೃತ್ವದ ತಂಡ

"ಜಾತಿ ನೋಡಿ ಟಿಕೆಟ್ ಕೊಡಿ". ಇದು ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಜೋರಾಗಿ ಸದ್ದು ಮಾಡ್ತಿರೋ ಹೊಸ ಸ್ಲೋಗನ್.  ರಾಜ್ಯದ ದೊಡ್ಡ ಸಮುದಾಯಗಳು ಟಿಕೆಟ್'ಗಾಗಿ ಜಾತಿ ಅಸ್ತ್ರವನ್ನು ಝಳಪಿಸ್ತಾ ಇವೆ. ವಿಧಾನಸಭೆಯಲ್ಲಿ ಸಮುದಾಯದ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡ್ತಿವೆ. ಹಾಗಾದ್ರೆ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಯಾವ ಸಮುದಾಯಕ್ಕೆ ಸಿಂಹಪಾಲು ಅನ್ನೋದೇ ಇರುವ ಕುತೂಹಲ.

Video Top Stories