ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!

ರಣರಣ ಬೆಳಗಾವಿ.. ಕುಟುಂಬ ಕದನ.. ಶತ್ರು-ಮಿತ್ರ ತಂತ್ರ..! ದಿಕ್ಕು ಬೇರೆ.. ಗುರಿಯೊಂದೇ..ಜಾರಕಿಹೊಳಿ ಜ್ವಾಲೆ..! ಕುಂದಾನಗರಿ ಪಂಚ ಪಾಂಡವರ ಪಟ್ಟು ಪಟ್ಟದ ಗುಟ್ಟು..! ಸರದಾರ ಸಾಹುಕಾರ.. ಸಹೋದರರ ರೋಚಕ ಚದುರಂಗ..!

Share this Video
  • FB
  • Linkdin
  • Whatsapp

ರಣರಣ ಬೆಳಗಾವಿ.. ಕುಟುಂಬ ಕದನ.. ಶತ್ರು-ಮಿತ್ರ ತಂತ್ರ..! ದಿಕ್ಕು ಬೇರೆ.. ಗುರಿಯೊಂದೇ..ಜಾರಕಿಹೊಳಿ ಜ್ವಾಲೆ..! ಕುಂದಾನಗರಿ ಪಂಚ ಪಾಂಡವರ ಪಟ್ಟು ಪಟ್ಟದ ಗುಟ್ಟು..! ಸರದಾರ ಸಾಹುಕಾರ.. ಸಹೋದರರ ರೋಚಕ ಚದುರಂಗ..! ಬೆಳಗಾವಿಯಲ್ಲಿ ಕಿಚ್ಚೆಬ್ಬಿಸಿದ ಡಿಸಿಸಿ ಬ್ಯಾಂಕ್​ ಎಲೆಕ್ಷನ್​ ಕದನ..! ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’..! ಕರೆಂಟ್ ಸೋಲಿಗೆ ಬ್ಯಾಂಕ್​ನಲ್ಲಿ ತೀರಿತು ಪ್ರತೀಕಾರ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸಹೋದರರ ಚಕ್ರವ್ಯೂಹ.. ಕಳೆದ ಎರಡು ದಶಕದಿಂದ ಜಾರಕಿಹೊಳಿ ಕುಟುಂಬ ರಾಜ್ಯ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿರೋದು ಹೇಗೆ?

ಕರುನಾಡಿನ ರಾಜಕೀಯದ ಶಕ್ತಿಕೇಂದ್ರ ಕುಂದಾನಗರಿ ಅಂದ್ರೆ ತಪ್ಪಾಗಲ್ಲ.. ಇಂಥಹ ಬೆಳಗಾವಿಯಲ್ಲಿ ಬಲಶಾಲಿಯಾಗಿ ನಿಂತಿರೋ ಜಾರಕಿಹೊಳಿ ಬ್ರದರ್ಸ್​ ರಾಜ್ಯ ರಾಜಕೀಯದಲ್ಲಿಯೂ ತಮ್ಮ ಪ್ರಾಬಲ್ಯವನ್ನ ಸಾಧಿಸಿದ್ದಾರೆ. ಬೆಳಗಾವಿ ರಾಜಕಾರಣಕ್ಕೆ ಹೊರಗಿನವರ ಎಂಟ್ರಿಯನ್ನ ಸಾಹುಕಾರ್ ಸಹೋದರರು ಸಹಿಸೋದೇ ಇಲ್ಲ. ಬೆಳಗಾವಿಯಲ್ಲಿ ಪ್ರಾಬಲ್ಯ ಸಾಧಿಸೋಕೆ ಅಲ್ಲಿನ ಕೆಲ ಕುಟುಂಬಗಳ ಮಧ್ಯೆಯೇ ಫೈಟ್ ಇದೆ. ಹೀಗಿರುವಾಗ ಈ ಕದನಕ್ಕೆ ಹೊರಗಿನವರು ಎಂಟ್ರಿ ಕೊಡೋಕೆ ಬಿಡ್ತಾರಾ ಹೇಳಿ..? ಖಂಡಿತ ಇಲ್ಲ. ಅದ್ರಲ್ಲಿಯೂ ಸಾಹುಕಾರ್ ಸಹೋದರರಂತೂ ಇದನ್ನ ಸಹಿಸೋದೇ ಇಲ್ಲ.

Related Video