Asianet Suvarna News Asianet Suvarna News
breaking news image

"Common Man Is More Powerful" ಅನ್ನೋ ನಿಮ್ಮ ಮಾತು ಬರೀ ಭಾಷಣಕ್ಕೆ ಸೀಮಿತವೇ?

ತಮಿಳುನಾಡಿನಲ್ಲಿ ಸಾಮಾನ್ಯವಾಗಿ ಲೋಕಸಭಾ ಚುನಾವಣೆ ವಿಚಾರಕ್ಕೆ ಬಂದರೆ ಯಾವಾಗಲೂ ಸ್ಟ್ರಾಂಗ್‌ ಲೀಡರ್‌ಗೆ ಮತ ಚಲಾವಣೆ ಮಾಡುತ್ತಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ  ತಿಳಿಸಿದ್ದಾರೆ.

ನಮ್ಮದು ವಿಶೇಷವಾದ ಪಕ್ಷ, ಏಪ್ರಿಲ್‌ 19 ರಂದು ಲೋಕಸಭಾ ಚುನಾವಣೆಗೆ (Lok Sabha Elections 2024) ಮತದಾನವಾಯಿತು, ಇದಾದ ನಂತರದಲ್ಲಿ ಕೇರಳದಲ್ಲಿ ಪ್ರಚಾರ ಮುಗಿಸಿ ಈಗ ಕರ್ನಾಟಕಕ್ಕೆ(Karnataka) ಬಂದಿದ್ದೇನೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾದ ನಂತರ ನಾವು ರೆಸ್ಟ್‌ ತೆಗೆದುಕೊಳ್ಳುತ್ತೇವೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ K Annamalai)ಹೇಳಿದ್ದಾರೆ. ಮೋದಿಜಿ ಅವರಿಗೆ ಅಣ್ಣಾಮಲೈ ಸಹ ಒಂದೇ ಕಾರ್ಯಕರ್ತರೂ ಸಹ ಒಂದೇ. ಪರಿಣಾಮ ಅವರು ಯಾವುದೇ ಭಿನ್ನಾಭಿಪ್ರಾಯ ಮಾಡುವುದಿಲ್ಲ ಎಂದ ಅವರು, ತಮಿಳುನಾಡಿನ(Tamilnadu) ರಾಜಕೀಯದ ಬಗ್ಗೆ ವಿವರಿಸಿದ್ದಾರೆ. ತಮಿಳುನಾಡಿನಲ್ಲಿ ಸಾಮಾನ್ಯವಾಗಿ ಲೋಕಸಭಾ ಚುನಾವಣೆ ವಿಚಾರಕ್ಕೆ ಬಂದರೆ ಯಾವಾಗಲೂ ಸ್ಟ್ರಾಂಗ್‌ ಲೀಡರ್‌ಗೆ ಮತ ಚಲಾವಣೆ ಮಾಡುತ್ತಾರೆ. ತಮಿಳುನಾಡಿನಲ್ಲಿ ಡಿಎಂಕೆ ಅವರು ಚುನಾವಣೆ ಹತ್ತಿರ ಬಂದರೆ ಸಾಕು ಮೊದಲು ಮುರುಘಾ ದೇವಾಲಯಕ್ಕೆ ಹೋಗುತ್ತಾರೆ. ನಂತರ ಕೈನಲ್ಲಿ ದಾರ ಕಟ್ಟಿಕೊಂಡು ಎಲ್ಲಾ ಕಡೆ ತಿರುಗಾಡುತ್ತಾರೆ. ಇದು ಪ್ರತಿ ಚುನಾವಣೆಯಲ್ಲಿ ಡಿಎಮ್‌ಕೆ ಮಾಡುವ ಕೆಲಸ. ಚುನಾವಣೆ ಆದ ಮೇಲೆ ಸನಾತನ ಧರ್ಮ(Sanatana Dharma) ಆರಂಭ ಮಾಡುತ್ತಾರೆ ಎಂದು ಲೇವಡಿ ಮಾಡಿದರು. ಜೊತೆಗೆ ಮೂರನೇ ಹಂತ ಆದ ಮೇಲೆ ಇಂಡಿಯಾ ಮೈತ್ರಿಕೂಟ ಇದೇ ರೀತಿ ಕೆಲಸ ಮಾಡುವುದಿಲ್ಲ, ಅವರ ಉತ್ಸಾಹ ಕಡಿಮೆ ಆಗಲಿದೆ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  Bidar: ಬೀದರ್‌ನಲ್ಲಿ ಬಿಜೆಪಿಗೆ ಮರಾಠ ಬಂಡಾಯದ ಬಿಸಿ! ಭಗವಂತ ಖುಬಾಗೆ ಟೆನ್ಷನ್‌..ಕಮಲಕ್ಕೆ ಭಾರಿ ಹೊಡೆತ ?

Video Top Stories