ಜೆಡಿಎಸ್ ಕಾರ್ಯಕರ್ತನಿಗೆ ಲೈಂಗಿಕ ಕಿರುಕುಳ : ಪ್ರಜ್ವಲ್ ಬಳಿಕ ಈಗ ಸೂರಜ್ ವಿರುದ್ಧವೂ ದೂರು

ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಈಗಾಗಲೇ ಪ್ರಜ್ವಲ್ ರೇವಣ್ಣ ಜೈಲು ಸೇರಿದ್ದರೆ ಇತ್ತ ಸೋದರ ಸೂರಜ್ ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯದ ಪ್ರಕರಣ ಕೇಳಿ ಬಂದಿದೆ.

First Published Jun 21, 2024, 11:31 PM IST | Last Updated Jun 21, 2024, 11:31 PM IST

ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಈಗಾಗಲೇ ಪ್ರಜ್ವಲ್ ರೇವಣ್ಣ ಜೈಲು ಸೇರಿದ್ದರೆ ಇತ್ತ ಸೋದರ ಸೂರಜ್ ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯದ ಪ್ರಕರಣ ಕೇಳಿ ಬಂದಿದೆ. ಜೆಡಿಎಸ್‌ ಕಾರ್ಯಕರ್ತನ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಕೇಳಿ ಬಂದಿದೆ. ಈಗಾಗಲೇ ಹೆಚ್‌ ಡಿ ರೇವಣ್ಣ ಒಮ್ಮೆ ಜೈಲು ನೋಡಿ ಬಂದಿದ್ದರೆ ಪತ್ನಿ ಭವಾನಿ ರೇವಣ್ಣ ಪ್ರಜ್ವಲ್ ಪ್ರಕರಣದಲ್ಲಿ ಸಾಕ್ಷ್ಯ ನಾಶದ ಆರೋಪ ಎದುರಿಸಿ ಸ್ವಲ್ಪದರಲ್ಲಿ ಜೈಲು ವಾಸದಿಂದ ಎಸ್ಕೇಪ್ ಆಗಿದ್ದರು. ಹೀಗಿರುವಾಗ ಇನ್ನೊಬ್ಬ ಪುತ್ರ ಸೂರಜ್ ಜೆಡಿಎಸ್ ಕಾರ್ಯಕರ್ತನಿಗೆಯೇ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 
 

Video Top Stories