Asianet Suvarna News Asianet Suvarna News

Mulayam Singh Yadav: ಉಸಿರು ಚೆಲ್ಲಿದ ಪೈಲ್ವಾನನ ಇಂಟ್ರೆಸ್ಟಿಂಗ್ ಕಥೆ!

ಉತ್ತರ ಪ್ರದೇಶ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಅದ ವಿಶಿಷ್ಟ ರಾಜಕಾರಣದ ಮೂಲಕ ಗಮನಸೆಳೆದಿದ್ದ ಮುಲಾಯಂ ಸಿಂಗ್‌ ಯಾದವ್‌ ನಿಧನರಾಗಿದ್ದಾರೆ. ಸಮಾಜವಾದಿ ಪಕ್ಷದ ಸಂಸ್ಥಾಪಕ, ನೇತಾಜಿ ಎಂದೇ ಕರೆಸಿಕೊಳ್ಳುತ್ತಿದ್ದ ಮುಲಾಯಂ ಸಿಂಗ್‌ ಯಾದವ್‌ 83 ವರ್ಷದಲ್ಲಿ ಅಸುನೀಗಿದರು.
 

First Published Oct 11, 2022, 5:26 PM IST | Last Updated Oct 11, 2022, 5:26 PM IST

ಬೆಂಗಳೂರು (ಅ.11): ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ 83ನೇ ವಯಸ್ಸಲ್ಲಿ ಉಸಿರು ಚೆಲ್ಲಿದ್ದಾರೆ. ಮುಲಾಯಂ ಉಸಿರು ಚೆಲ್ಲಿದ ಹೊತ್ತಲ್ಲೇ 28 ಕರಸೇವಕರ ನರಮೇಧದ ನೆನಪು ಮತ್ತೊಮ್ಮೆ ಎದ್ದು ಕೂತಿದೆ. ಘಟನೆಯನ್ನು ಸಮರ್ಥಿಸಿಕೊಂಡಿದ್ದ ಮುಲಾಯಂಗೆ ಯಾವತ್ತಾದ್ರೂ ಪಾಪಪ್ರಜ್ಞೆ ಕಾಡಿದ್ದಿದ್ಯಾ ಅನ್ನೋದು ಎಲ್ಲರ ಮುಂದಿರುವ ಪ್ರಶ್ನೆ.

ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶ ರಾಜಕೀಯ ಅಖಾಡದ ಹಳೇ ಪೈಲ್ವಾನ್. ಮೂರು ಬಾರಿ ಮುಖ್ಯಮಂತ್ರಿಯಾದವರು. ರಾಜಕೀಯ ಏರಿಳಿತಗಳ ಮಧ್ಯೆ 1990ರಲ್ಲಿ ನಡೆದ ಗೋಲಿಬಾರ್, ಕರಸೇವಕರ ಸಾವು ಮುಲಾಯಂ ರಾಜರಕೀಯ ಚರಿತ್ರೆಯ ಮರೆಯಲಾಗದ ಅಧ್ಯಾಯ ಎಂದರೆ ತಪ್ಪಾಗಲಾರದು.

Mulayam Singh Yadav; ಮುಲಾಯಂಸಿಂಗ್‌ ಯಾದವ್‌ಗೆ ಮೈಸೂರು ನಂಟು!

ಪಶ್ಚಾತ್ತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ್ತ ಮತ್ತೊಂದಿಲ್ಲ ಅಂತಾರೆ ತಾವು ನೀಡಿದ ಗೋಲಿಬಾರ್ ಆದೇಶಕ್ಕೆ 28 ಮಂದಿ ಕರಸೇವಕರು ಬಲಿಯಾಗಿದ್ದಕ್ಕೆ ಕೊನೆಗಾಲದಲ್ಲಿ ಮುಲಾಯಂ ಸಿಂಗ್ ಯಾದವ್ ವಿಷಾದ ವ್ಯಕ್ತಪಡಿಸಿದ್ದರು.