ಮಹಾರಾಷ್ಟ್ರ ಕ್ಷಿಪ್ರಕ್ರಾಂತಿಯ ನಾಯಕನ ಹಿಂದಿದೆ ದುರಂತ ಕಥೆ..!

ಮಹಾವಿಕಾಸ್‌ ಅಘಾಡಿ ಸರ್ಕಾರದಲ್ಲಿ ಬಂಡಾಯವೆದ್ದು, ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚನೆ ಮಾಡಿರುವ ಏಕನಾಥ್‌ ಶಿಂಧೆ ಈಗ ಮಹಾರಾಷ್ಟ್ರದ ಹೊಸ ಸಿಎಂ. ಆದರೆ, ತಮ್ಮ ರಾಜಕೀಯ ಜೀವನದಲ್ಲಿ ಆರಂಭದಲ್ಲಿ ದುರಂತಗಳಲ್ಲೇ ಕಂಡಿದ್ದ ಶಿಂಧೆ ಇಂದು ಬಲಾಢ್ಯ ನಾಯಕನಾಗಿರುವ ಹಿಂದಿನ ಕಥೆಯೇನು ಎನ್ನುವುದರ ರಿಪೋರ್ಟ್‌.

Share this Video
  • FB
  • Linkdin
  • Whatsapp

ಬೆಂಗಳೂರು (ಜುಲೈ 2): ಏಕನಾಥ್‌ (Eknath shinde) ಶಿಂಧೆ ಒಡಲಲ್ಲಿ ಅಡಗಿ ಕೂತಿದೆ ಮರೆಯಲಾಗದ ಮಹಾಘಾತ..! ಆಟೋಡ್ರೈವರ್, ಹಣಬಲ, ತೋಳ್ಬಲ, ಜನಬಲ... ಕಣ್ಣ ಮುಂದೆಯೇ ಪುಟ್ಟ ಮಕ್ಕಳಿಬ್ಬರನ್ನು ಕಳೆದುಕೊಂಡಿದ್ದರು ಏಕನಾಥ ಶಿಂಧೆ... ರಾಜಕೀಯವೇ ಬೇಡ ಅಂದಿದ್ದ ಶಿಂಧೆ ಸಿಎಂ ಪಟ್ಟಕ್ಕೇರಿದ್ದು ಹೇಗೆ..? ಯಾರು ಶಿಂಧೆ ಹಿಂದಿನ ಅಸಲಿ ಶಕ್ತಿ..? 

ಮಹಾರಾಷ್ಯ್ರ ಮುಖ್ಯಮಂತ್ರಿ (maharashtra CM) ಏಕನಾಥ ಶಿಂಧೆ ಪದೇ ಪದೇ ಆನಂದ್ ದಿಘೆ (anand dighe) ಬಗ್ಗೆ ಮಾತಾಡ್ತಾರೆ. ಹೆಜ್ಜೆ ಹೆಜ್ಜೆಗೂ ಆ ಹೆಸರನ್ನು ಸ್ಮರಿಸಿಕೊಳ್ತಾರೆ.. ಹಾಗಾದ್ರೆ ಈ ಆನಂದ್ ದಿಘೆ ಯಾರು..? ಅವರಿಗೂ ಶಿಂದೆಗೂ ಏನ್ ಸಂಬಂಧ..? ಏಕನಾಥ್‌ ಶಿಂದೆ ಪದೇ ಪದೇ ಹೇಳೋ ಹೆಸರುಗಳು ಎರಡು. ಒಂದು ಬಾಳಾ ಠಾಕ್ರೆ (balasaheb thackeray), ಮತ್ತೊಂದು ಆನಂದ್ ದಿಘೆ... ಶಿಂಧೆ ಇವತ್ತು ಸಿಎಂ ಆಗಿದ್ದಾರೆ ಅಂದ್ರೆ ಅದಕ್ಕೆ ಅವರೇ ಕಾರಣ. ಹಾಗಾದ್ರೆ ಈ ಆನಂದ್ ದಿಘೆ ಯಾರು..? ಆಟೋಡ್ರೈವರ್'ನಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಪಟ್ಟದವರೆಗೆ... ಏಕನಾಥ ಶಿಂಧೆಯವರ ರಾಜಕೀಯ ಪ್ರಯಾಣ ಯಾವ ಸಿನಿಮಾ ಕಥೆಗೂ ಕಮ್ಮಿಯಿಲ್ಲ. 

Maharashtra Politics: ಮಹಾರಾಷ್ಟ್ರಕ್ಕೆ ಫಡ್ನವೀಸ್‌ ಏಕೆ ಸಿಎಂ ಆಗಲಿಲ್ಲ?

ಅಘಾಡಿ ಸರ್ಕಾರ ಪತನದ ಹಿಂದಿನ ಮಾಸ್ಟರ್‌ಮೈಂಡ್‌, ಶಿವಸೇನೆ ಬಂಡಾಯ ಶಾಸಕರ ನಾಯಕ, ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಪುತ್ರನ ವಿರುದ್ಧವೇ ಬಂಡೆದ್ದು, ಅವರನ್ನೇ ಮುಖ್ಯಮಂತ್ರಿ ಕುರ್ಚಿಯಿಂದ ಉರುಳಿಸಿ ಆ ಕುರ್ಚಿಯಲ್ಲಿ ಕೂತಿರೋ ಏಕನಾಥ್ ಶಿಂಧೆ ಈಗ ಮಹಾರಾಷ್ಟ್ರದ ಮೋಸ್ಟ್ ಪವ್"ಫುಲ್ ಲೀಡರ್. 

Related Video