
ದಿಡೀರ್ ಖಾತೆ ಬದಲಾವಣೆ, ಶ್ರೀರಾಮುಲು ಅಸಮಾಧಾನ; ಸಿಎಂ ಜೊತೆ ಮಹತ್ವದ ಚರ್ಚೆ
ಆರೋಗ್ಯ ಇಲಾಖೆ ಸಮನ್ವಯ ಕೊರತೆ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿರುವ ಸಿಎಂ, ಶ್ರೀರಾಮುಲು ಬಳಿ ಇರುವ ಆರೋಗ್ಯ ಖಾತೆಯನ್ನು ಸುಧಾಕರ್‌ಗೆ ವಹಿಸಿದ್ದಾರೆ.
ಬೆಂಗಳೂರು (ಅ. 12): ಆರೋಗ್ಯ ಇಲಾಖೆ ಸಮನ್ವಯ ಕೊರತೆ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿರುವ ಸಿಎಂ, ಶ್ರೀರಾಮುಲು ಬಳಿ ಇರುವ ಆರೋಗ್ಯ ಖಾತೆಯನ್ನು ಸುಧಾಕರ್‌ಗೆ ವಹಿಸಿದ್ದಾರೆ. ಶ್ರೀ ರಾಮುಲುಗೆ ಸಮಾಜ ಕಲ್ಯಾನ ಇಲಾಖೆ ನೀಡಲು ನಿರ್ಧರಿಸಿದ್ದಾರೆ.
ಉಪಚುನಾವಣೆ ಮುನ್ನ ಸಂಪುಟ ಸರ್ಜರಿ; ಇಬ್ಬರು ಸಚಿವರ ಖಾತೆ ದಿಢೀರ್ ಬದಲು
ದಿಢೀರ್ ಖಾತೆ ಬದಲಾವಣೆಗೆ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಸಿಎಂರನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಲಿದ್ಧಾರೆ. ಹೊಸ ಖಾತೆಯನ್ನು ಸ್ವೀಕರಿಸಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಆಪ್ತರ ಬಳಿ ಸಲಹೆಯನ್ನೂ ಕೇಳುತ್ತಿದ್ದಾರೆ.